top of page

STAR KARNATAKA

ಸ್ಟಾರ್ ಕರ್ನಾಟಕ 

ಧರ್ಮೋ ರಕ್ಷತಿ ರಕ್ಷಿತಃ 

ಸ್ಟಾರ್ ಕರ್ನಾಟಕ 

  • Facebook
  • Twitter
  • Instagram
  • Youtube

Depths of Meditation  ಶಿವ ಸತಿಯನ್ನು ಕಳ್ಕೊಂಡು ಧ್ಯಾನಕ್ಕೆ ಕೂತ ಕಾಲ... ತಾರಕ ಅನ್ನೋ ಅಸುರ ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿಕೊಂಡು ನಂಗೆ ಸಾವು ಬಂದ್ರೆ ಶಿವನ ಮಗನಿಂದಲೇ ಸಾವು ಬರ್

  • Sep 6, 2025
  • 4 min read

Updated: Sep 7, 2025

The Desolation of Shiva: A Journey into the Depths of Meditation
 ಶಿವ ಸತಿಯನ್ನು ಕಳ್ಕೊಂಡು ಧ್ಯಾನಕ್ಕೆ ಕೂತ ಕಾಲ... ತಾರಕ ಅನ್ನೋ ಅಸುರ ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿಕೊಂಡು ನಂಗೆ ಸಾವು ಬಂದ್ರೆ ಶಿವನ ಮಗನಿಂದಲೇ ಸಾವು ಬರ್ಬೇಕು ಅಂತ ವರ ಕೇಳ್ತಾನೆ,

ಅದು ಶಿವ ಸತಿಯನ್ನು ಕಳ್ಕೊಂಡು ಧ್ಯಾನಕ್ಕೆ ಕೂತ ಕಾಲ... ತಾರಕ ಅನ್ನೋ ಅಸುರ ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿಕೊಂಡು ನಂಗೆ ಸಾವು ಬಂದ್ರೆ ಶಿವನ ಮಗನಿಂದಲೇ ಸಾವು ಬರ್ಬೇಕು ಅಂತ ವರ ಕೇಳ್ತಾನೆ, ಅವನ ಪ್ರಕಾರ ಅದು ಅಸಾಧ್ಯ..., The Desolation of Shiva: A Journey into the Depths of Meditation

ಸರಿ... ಬ್ರಹ್ಮ ತಥಾಸ್ತು ಅಂತಾರೆ,

ಇನ್ನು ನನ್ನ ಹಿಡಿಯೋವ್ರೆ ಇಲ್ಲ ಅಂತ ತಾರಕನ ಅಟ್ಟಹಾಸ ಜಾಸ್ತಿ ಆಗುತ್ತೆ.


ಪ್ರತಿಯೊಂದರ ಅಂತ್ಯಕ್ಕೆ ಕಾಲ ಕೂಡಿ ಬರಬೇಕು...,

ಆ ಕಾಲ ಹತ್ತಿರ ಆಗ್ತಿದ್ದ ಹಾಗೇ ಅಲ್ಲಿ ಅದೇ ಸತಿ ಪರ್ವತರಾಜನ ಮಗಳು ಪಾರ್ವತಿಯಾಗಿ ಹುಟ್ಟಿ ಶಿವನನ್ನೇ ವರಿಸಬೇಕು ಅಂತ ತಪಸ್ಸು ಮಾಡ್ತಾಳೆ,

ಶಿವ ಪಾರ್ವತಿಯರ ಕಲ್ಯಾಣ ಆಗಬೇಕಾಗಿರುತ್ತೆ,

ಅದ್ರಿಂದ ದುಷ್ಟ ಸಂಹಾರ, ಲೋಕ ಕಲ್ಯಾಣ ಆಗಬೇಕಾಗಿರುತ್ತೆ.


ದೇವತೆಗಳೆಲ್ಲ ಬ್ರಹ್ಮ, ವಿಷ್ಣುವಿನ ಹತ್ತಿರ ಹೋಗಿ ಕಾಪಾಡು ಅಂತಾರೆ, ಶಿವನನ್ನ ಎಬ್ಬಿಸಿ ಪಾರ್ವತಿಯನ್ನು ವರಿಸುವಂತೆ ಮಾಡು ಅಂದಾಗ ವಿಷ್ಣು ಈ ಕಾರ್ಯಕ್ಕೆ ಮನ್ಮಥನನ್ನು ಆರಿಸ್ತಾರೆ,

ಶಿವನ ತಪಸ್ಸನ್ನು ಭಂಗ ಮಾಡೋದು ಅಂದ್ರೆ ಯಾರಿಗೇ ಆದ್ರೂ ಭಯವೇ... ಆದ್ರೂ ಲೋಕಕಲ್ಯಾಣಕ್ಕಾಗಿ ಅವ್ನು ಒಪ್ಕೊಳ್ತಾನೆ, ರತಿ ಮನ್ಮಥರ ಪ್ರಯತ್ನ ಸಫಲ ಆಗದಾದಾಗ ಬೇರೆ ದಾರಿ ಕಾಣದೆ ಮನ್ಮಥ ಶಿವನಿಗೆ ತನ್ನ ಹೂಬಾಣದಿಂದ ಹೊಡೆದು ಶಿವನ ಕೋಪಕ್ಕೆ ಗುರಿಯಾಗಿ ಭಸ್ಮವೂ ಆಗ್ತಾನೆ 😢


ರತಿ ಗಂಡನನ್ನ ಕಳ್ಕೊಂಡ ದುಃಖದಲ್ಲಿ ಪಾರ್ವತಿಗೆ ನೀನು ಮದುವೆ ಆಗೋದಕ್ಕಾಗಿ ನಾನು ವಿಧವೆ ಆಗಬೇಕಾಯ್ತು,

ಅದಕ್ಕೇ ನೀನು ಶಿವನನ್ನು ಮದುವೆ ಆದ್ರೂ ನೀನು ನಿನ್ನ ಹೊಟ್ಟೆಯಲ್ಲಿ ಗರ್ಭ ಧರಿಸಿ ಮಗುವಿಗೆ ಜನ್ಮ ಕೊಡದ ಹಾಗಾಗಲಿ ಅಂತ ಶಾಪ ಕೊಡ್ತಾಳೆ 😢


ಸರಿ... ಶಿವ ಪಾರ್ವತಿಯರ ಮದುವೆ ಆಗುತ್ತೆ,

ಅವರಿಬ್ಬರ ಅಂಶದಿಂದ 6 ಭ್ರೂಣಗಳು ಸೃಷ್ಠಿ ಆಗುತ್ವೆ, ಆದ್ರೆ ಶಾಪ ಇದ್ದಿದ್ದರಿಂದ ಪಾರ್ವತಿ ಆ ಭ್ರೂಣವನ್ನ ತನ್ನ ಗರ್ಭದಲ್ಲಿ ಇಟ್ಕೊಳ್ಳೋಕಾಗಲ್ಲ.

ಶಿವ+ಶಕ್ತಿಯರ ಅಂಶ ಅಂದ್ರೆ ಬೇರೆ ಯಾರೋ ಅದನ್ನ ಧರಿಸಬಹುದು ಅನ್ನೋವಂತ ಸಾಮಾನ್ಯ ಭ್ರೂಣ ಅಲ್ಲ..., ಇಂದ್ರ, ಅಗ್ನಿ, ಭೂಮಿ ಕೊನೆಗೆ ಗಂಗೆಗೂ ಆ ಭ್ರೂಣವನ್ನು ಧರಿಸೋಕೆ ಸಾಧ್ಯ ಆಗಲ್ಲ. ಅದರ ಮೇಲೆ ರಾಕ್ಷಸ ತಾರಕನ ಕಾಟ ಬೇರೆ..., ಕೊನೆಗೆ ಗಂಗೆ ಆ ಭ್ರೂಣವನ್ನು ಶರವಣ ಅನ್ನೋ ನದಿಯಲ್ಲಿ ಬಿಡ್ತಾಳೆ.

ಅಲ್ಲಿಗೆ ಬಂದಿದ್ದ ಕೃತಿಕೆಯರು ಆ 6 ಭ್ರೂಣವನ್ನೂ ನಕ್ಷತ್ರ ಲೋಕಕ್ಕೆ ತಗೊಂಡು ಹೋಗಿ ಮಗುವಾದ ಮೇಲೆ ತಾವೇ ತಾಯಿಯಾಗಿ ಬೆಳೆಸ್ತಾರೆ.


ಮುಂದೆ ಈ ವಿಷಯ ಪಾರ್ವತಿಗೆ ಗೊತ್ತಾದಾಗ ಅವ್ಳು ಆ 6 ಮಕ್ಕಳನ್ನೂ ಕೂಡಿಸಿ 6 ತಲೆ, 12 ಕೈ ಇರೋ ಒಂದೇ ಮಗುವನ್ನು ಮಾಡ್ತಾರೆ, ಅದಕ್ಕೇ ಅವನನ್ನ ಷಣ್ಮುಖ ಅಂತಾನೂ ಕರೀತಾರೆ. ಪಾರ್ವತಿ ಆ ಕೃತಿಕೆಯರಿಗೆ ನನ್ನ ಮಗನನ್ನ ನನಗೇ ಕೊಟ್ಟು ಬಿಡಿ ಅಂತಾಳೆ, ಜಗನ್ಮಾತೆ ಆದ್ರೂ ಅವಳೂ ಹೆಣ್ಣು, ಅವಳೂ ಒಬ್ಬ ತಾಯಿ ಅಲ್ವಾ,

ವಿಷಯ ದೊಡ್ಡದಾಗುತ್ತೆ... ಬ್ರಹ್ಮ, ಶಿವ ಇಬ್ಬರೂ ನ್ಯಾಯ ಹೇಳೋಕೆ ಆಗದೇ ಹೋದಾಗ ವಿಷ್ಣು ಬಂದು ಸೃಷ್ಠಿ ಮಾಡೋವ್ರಿಗಿಂತ ಪಾಲನೆ ಮಾಡೋವ್ರಿಗೆ ಮಕ್ಕಳ ಮೇಲೆ ಹೆಚ್ಚಿನ ಹಕ್ಕಿರುತ್ತೆ ಅಂತಾರೆ.... May be ಅದೇ ಕಾರಣಕ್ಕೆ ಅನ್ಸತ್ತೆ ತನ್ನ ಮೇಲೆ ದೇವಕಿಗಿಂತ ಯಶೋಧೆಗೆ ಜಾಸ್ತಿ ಹಕ್ಕಿತ್ತು ಅಂತಾನೆ ಕೃಷ್ಣ.


ಸರಿ ಕಾರ್ತಿಕೇಯ ನಕ್ಷತ್ರ ಲೋಕದಲ್ಲಿ ಬೆಳಿತಾ ಇರ್ತಾನೆ,

ತಾರಕನನ್ನ ಸಂಹಾರ ಮಾಡೋ time ಬರುತ್ತೆ... ಎಲ್ಲಾ ದೇವತೆಗಳು ಅವನಿಗೆ ಅಸ್ತ್ರಗಳನ್ನು ಕೊಟ್ಟು ಆಶೀರ್ವಾದ ಮಾಡ್ತಾರೆ, ತಾರಕನ ಸಂಹಾರ ಆಗುತ್ತೆ.

ದೇವತೆಗಳು ಎಲ್ಲರೂ ಸೇರಿ ಅವನನ್ನ ದೇವ ಸೇನಾನಿ ಅಂತ ಮಾಡ್ತಾರೆ, ಮುಂದೆ ಅವ್ನು ತುಂಬ ಅಸುರ ಸಂಹಾರ ಮಾಡ್ತಾನೆ.

____________________________________________


ಒಮ್ಮೆ ಶಿವ ಕಾರ್ತಿಕೇಯನಿಗೆ ಸೃಷ್ಟಿಕರ್ತ ಬ್ರಹ್ಮನ ಹತ್ರ ವಿದ್ಯೆ ಕಲಿಯೋಕೆ ಕಳಿಸ್ತಾರೆ,

ಬ್ರಹ್ಮ ದೇವ ಹೇಳಿಕೊಟ್ಟಿದ್ದು ಕಲಿಯದೇ ಕಾರ್ತಿಕೇಯ ನನಗೆ ಓಂ ಅಂದ್ರೆ ಏನು ಅಂತ ಹೇಳಿ ಅಂತಾರೆ, ಮೊದಲು ಅಕ್ಷರದಿಂದ ಶುರು ಮಾಡಿ ಆಮೇಲೆ ದೊಡ್ಡ ದೊಡ್ಡ ವಿಷಯಗಳನ್ನ ಕಲೀರಿ ಅಂದ್ರೆ ಕೇಳಲ್ಲ, ನಾನು ಮೊದಲೇ ಉನ್ನತ ಮಟ್ಟದ ವಿಷಯ ಕಲಿಬೇಕು ಅಂತ ಹಟ ಮಾಡ್ತಾರೆ.


ಆಗ ಬ್ರಹ್ಮ ಅವನನ್ನ ಶಿವನ ಹತ್ರನೇ ಕರ್ಕೊಂಡು ಬಂದು ನಿಮ್ಮ ಮಗ ಹೀಗೆ ಮಾಡ್ತಾನೆ ಅಂತ complaint ಮಾಡ್ತಾರೆ, ಶಿವ ಹಾಗೆಲ್ಲ ಮಾಡಬಾರದು ಅಂತ ಬುದ್ಧಿ ಹೇಳಿದರೂ ಸರಿ ನನಗೆ ಓಂ ಅಂದ್ರೆ ಏನು ಹೇಳೋಕೆ ಹೇಳಿ ಅಂದಾಗ ಬ್ರಹ್ಮ ಮಾತ್ರ ಅಲ್ಲ, ಶಿವನೂ ನನಗೂ ಗೊತ್ತಿಲ್ಲ, ನೀನೇ ಹೇಳು ಅಂತಾರೆ.

ನಂಗೆ ಗುರುವಿನ ಸ್ಥಾನ (ಎಲ್ಲರಿಗಿಂತ ಎತ್ತರವಾದ ಸ್ಥಾನ) ಕೊಟ್ರೆ ಮಾತ್ರ ಹೇಳ್ತೀನಿ ಅಂದಾಗ ಶಿವ ತನಗಿಂತ ಎತ್ತರದ ಸ್ಥಾನ ಕೊಡಬೇಕು ಅಂತ ಕಾರ್ತಿಕೇಯನನ್ನ ತನ್ನ ಮೈ ಮೇಲೆ ಕೂರಿಸಿಕೊಳ್ತಾರೆ ಆಗ ಕಾರ್ತಿಕೇಯ ತಂದೆಯ ಕಿವಿಯಲ್ಲಿ ಓಂ.... ಅಂದ್ರೆ ಅಂತ ಪ್ರಣವ ಮಂತ್ರದ ಅರ್ಥ ಹೇಳ್ತಾರೆ, ಸಮಸ್ತ ಸೃಷ್ಠಿ, ತ್ರಿಮೂರ್ತಿಗಳ ಸೃಷ್ಠಿ, ಲಯ, ಪ್ರಳಯ ಎಲ್ಲವೂ ಓಂ ನಲ್ಲಿದೆ ಅಂತಾರೆ, ಅದು ಯಾರಿಂದಲೂ ಮುರಿಯಲಾಗದ, ಅಳಿಸಲಾಗದ ಶಕ್ತಿ ಅಂತ ವಿವರಿಸ್ತಾರೆ.

ಈ ದೃಶ್ಯ ನೋಡಿ ದೇವಿ ಪಾರ್ವತಿ ನನ್ನ ನಾಥನಿಗೆ ಗುರು(ಸ್ವಾಮಿ) ಆದ ನೀನು ಸ್ವಾಮಿನಾಥ ಅಂತ ಕರಿತಾಳೆ.


ಇದೇ ಪ್ರಸಂಗದಲ್ಲಿ ಕಾರ್ತಿಕೇಯ ಬ್ರಹ್ಮನಿಗೆ ಶಿಕ್ಷೆಯನ್ನು ಕೊಡ್ತಾರೆ ಅಂತೆ, ಆಮೇಲೆ ಹಾಗೆ ನಡ್ಕೊಂಡಿದ್ದು ತಪ್ಪು ಅನ್ನಿಸಿ ತನಗೆ ತಾನೇ ಹಾವಾಗೋ ಹಾಗೆ ಶಾಪ ಕೊಟ್ಕೊಂಡ್ರು ಅಂತಾನೂ ಅಂತಾರೆ.

____________________________________________


ಒಮ್ಮೆ ಗಣೇಶ, ಕಾರ್ತಿಕೆಯರಲ್ಲಿ ಯಾರು ಹೆಚ್ಚು ಶಕ್ತಿಶಾಲಿ, ಬುದ್ದಿವಂತ ಅವರಿಗೆ ಮೊದಲು ಮದುವೆ ಮಾಡ್ಬೇಕು ಅನ್ನೋ ಮಾತು ಬರುತ್ತೆ ನಾರದರಿಂದ..., ಸರಿ ಯಾರು ಮೊದಲು ಪ್ರಪಂಚ ಸುತ್ತಿ ಬರ್ತಾರೋ ಅವರೇ ಈ ಸ್ಪರ್ಧೆಯಲ್ಲಿ ಗೆದ್ದ ಹಾಗೆ ಅಂತ ಆಗುತ್ತೆ.


ಕಾರ್ತಿಕೇಯ ತನ್ನ ನವಿಲಿನ ಮೇಲೆ ಹೋಗ್ತಾನೆ, ಆದ್ರೆ ಗಣೇಶ ತಂದೆ ತಾಯಿಯೇ ಪ್ರಪಂಚ ಅಂತ ಅವರನ್ನೇ ಸುತ್ತಿ ಸೈ ಅನ್ನಿಸಿಕೊಳ್ತಾರೆ.


ಕಾರ್ತಿಕೇಯ ಕೈಲಾಸ ಪರ್ವತಕ್ಕೆ ವಾಪಸ್ ಬಂದಾಗ ಗಣೇಶನಿಗೆ ರಿದ್ಧಿ, ಸಿದ್ಧಿ ಅನ್ನೋ ಇಬ್ಬರು ಹೆಂಡತಿ ಮತ್ತೆ ಶುಭ, ಲಾಭ ಅನ್ನೋ ಇಬ್ಬರು ಮಕ್ಕಳು ಆಗಿರೋದನ್ನ ನೋಡಿ ಅವ್ನು ಹೇಗೆ ಮೊದಲು ಬಂದ ಅಂತ ಕೇಳಿ ಅವ್ರು ಅಪ್ಪ ಅಮ್ಮನನ್ನೇ ಪ್ರಪಂಚ ಅಂತ ಸುತ್ತಿದ್ದು ಕೇಳಿ ಅಪ್ಪ ಅಮ್ಮ ನಂಗೆ ಮೋಸ ಮಾಡಿದ್ರಿ ಅಂತ ಕೋಪದಿಂದ ಕೈಲಾಸ ಬಿಟ್ಟು ಹೊರಡ್ತಾರೆ.


ಅವ್ರು ಕ್ರೌಂಚ ಪರ್ವತದಲ್ಲಿ ಇದಾರೆ ಅಂತ ಶಿವ ಪಾರ್ವತಿ ಅವರನ್ನ ವಾಪಸ್ ಕರ್ಕೊಂಡು ಹೋಗೋಕೆ ಬರ್ತಾರೆ ಆದ್ರೆ ಕಾರ್ತಿಕೇಯ ಅಲ್ಲಿಂದ ಮುಂದೆ ಶ್ರೀಶೈಲಕ್ಕೆ ಹೋಗ್ತಾರೆ, ಮುಂದೆ ನಮ್ಮ ದಕ್ಷಿಣ ಭಾರತದ ಕಡೆ ಬರ್ತಾರೆ.

____________________________________________


ಹಾಗೇ ಕಾರ್ತಿಕೇಯನಿಗೂ ಇಬ್ಬರು ಹೆಂಡತಿಯರು.


ಇಂದ್ರನ ಮಗಳು ದೇವಯಾನಿ/ದೇವಸೇನಳನ್ನ ಶೂರ ಪದ್ಮಸುರ ಅನ್ನೋ ರಾಕ್ಷಸ ತನ್ನ ಸೆರೆಯಲ್ಲಿ ಇಟ್ಕೊಂಡಾಗ ಕಾರ್ತಿಕೇಯ ಅವನ ಜೊತೆ ಯುದ್ಧ ಮಾಡಿ ಗೆದ್ದು ದೇವಸೇನಳನ್ನ ಬಿಡಿಸಿ ಅವರ ತಂದೆಗೆ ಒಪ್ಪಿಸಿ ಕುಮಾರ ಪರ್ವತದಲ್ಲಿ ಸ್ವಲ್ಪ ಹೊತ್ತು ನೆಲೆಸಿ ಅಲ್ಲಿಯ ಧಾರ ನದಿಯಲ್ಲಿ ತಮ್ಮ ಆಯುಧಗಳನ್ನು ತೊಳೆದುಕೊಂಡ್ರು, ಅಲ್ಲಿಂದ ಆ ನದಿಗೆ ಕುಮಾರಧಾರ ನದಿ ಅಂತ ಹೆಸರು ಬಂತು ಅಂತಾರೆ.

ಅದೇ ನದಿ ತಟದಲ್ಲೇ ಇಂದ್ರ ತನ್ನ ಅವಳನ್ನ ಅವರಿಗೆ ಧಾರೆ ಎರೆದು ಕೊಡ್ತಾರೆ.

ಮತ್ತೆ ಆ ಶೂರಪದ್ಮಸುರ ರಾಕ್ಷಸ ಶರೀರ ಬಿಟ್ಟು ನವಿಲಾಗಿ ಕಾರ್ತಿಕೇಯನ ವಾಹನ ಆದ ಅಂತಾರೆ.


ಅಲ್ಲಿಯ ಗುಹೆಯಲ್ಲಿಯೆ ಸರ್ಪರಾಜ ವಾಸುಕಿ ಸರ್ಪಕುಲದ ಒಳಿತಿಗಾಗಿ, ಗರುಡನಿಂದ ರಕ್ಷೆಗಾಗಿ ಕಾರ್ತಿಕೇಯನನ್ನ ತಪಸ್ಸು ಮಾಡಿ ಒಲಿಸಿಕೊಳ್ತಾರೆ,

ಆಗ ಕಾರ್ತಿಕೇಯ ನಿನ್ನೊಂದಿಗೇ ಇಲ್ಲೇ ನೆಲೆಸ್ತೀನಿ ಅಂತ ಅಭಯ ಕೊಟ್ಟು ಅಲ್ಲಿ ನೆಲೆಸ್ತಾರೆ, ಅಲ್ಲಿ ವಾಸುಕಿ/ನಾಗಕ್ಕೆ ಮಾಡುವ ಪೂಜೆ ಕಾರ್ತಿಕೇಯನಿಗೆ ಸಲ್ಲುತ್ತೆ ಅಂತಾರೆ.


ಇನ್ನೊಬ್ಬರು ವಲ್ಲಿ... ಬುಡಕಟ್ಟು ಜನರ ನಾಯಕ ನಂಬಿರಾಜನ್ ಅವರ ಮಗಳು. ಅವಳನ್ನು ನೋಡಿ ಇಷ್ಟ ಪಡ್ತಾರೆ.

ಅವರಿಬ್ಬರನ್ನು ಒಂದು ಮಾಡೋಕೆ ಗಣೇಶ ಆನೆ ರೂಪದಲ್ಲಿ ಬಂದು ಅವಳ ಮೇಲೆ ದಾಳಿ ಮಾಡ್ತಾರೆ, ಆಗ ಅವ್ಳು ಕಾರ್ತಿಕೇಯನನ್ನ ಆನೆಯಿಂದ ಕಾಪಾಡಿ ಅಂತಾರೆ, ಆನೆಯ ದಾಳಿಯಿಂದ ಅವಳನ್ನ ಕಾಪಾಡಿದ್ರೆ ತನ್ನನ್ನ ಮದುವೆ ಆಗಬೇಕು ಅಂದಾಗ ಅವ್ಳು ಒಪ್ತಾಳೆ, ಆಮೇಲೆ ಆನೆಯಿಂದ ಕಾಪಾಡಿ ತನ್ನ ನಿಜ ಪರಿಚಯ ಹೇಳ್ತಾರೆ, ಆಮೇಲೆ ಅವ್ರ ತಂದೆ ತಾಯಿ ಒಪ್ಪಿ ಅವಳನ್ನು ಮದುವೆ ಮಾಡಿ ಕೊಡ್ತಾರೆ.


ಇದಷ್ಟು ಸ್ಕಂದ ಪುರಾಣದಲ್ಲಿ ಸಿಗುತ್ತೆ 📒🚩

____________________________________________


ಅಸುರರ ಮೇಲೆ ದಾಳಿ ಮಾಡಿ ಸಂಹರಿಸೋದ್ರಿಂದ

ಅವ್ನು #ಸ್ಕಂದ

ಯುದ್ಧ ಬಂದಾಗ ದೇವತೆಗಳ ಸೇನೆಗೆ ಅಧಿಪತಿ ದೇವ ಸೇನೆಯನ್ನು ಮುನ್ನಡೆಸೋದ್ರಿಂದ ಅವ್ನು #ದೇವಸೇನಾನಿ

6 ಮುಖ ಇರೋದ್ರಿಂದ #ಷಣ್ಮುಖ

ಕೃತಿಕೆಯರ ಮಗನಾಗಿ ಬೆಳೆದವ #ಕಾರ್ತಿಕೇಯ

ದುಷ್ಟ ಸಂಹಾರ ಮಾಡಿ ಶುಭ, ಮಂಗಳಕಾರಕ ಅಂತ

ಮನ್ನಣೆ ಪಡೆದಿದ್ರಿಂದ ಅವ್ನು #ಸುಬ್ರಮಣ್ಯ

ಚಂದ್ರನಂತ ಚೆಲುವನ್ನು ಹೊಂದಿದವನು #ಮುರುಗ

ಶಿವ ಶಕ್ತಿಯರ ಮಗ #ಕುಮಾರ

ಪಾರ್ವತಿಯ ನಾಥನಿಗೆ ಗುರು ಆದವನು #ಸ್ವಾಮಿನಾಥ


ಯಾವ ದೇವರ ಬಗ್ಗೆ ಆದ್ರೂ ನಿಮಗೆ ಭಕ್ತಿ ಇಲ್ಲ ಅಂದ್ರೆ ತೆಪ್ಪಗೆ ಇರಿ, ದೇವರೇನೂ ಕೊರಗಲ್ಲ... ಸೊರಗಲ್ಲ.

ಆದ್ರೆ ದೇವರ ಹೆಸರುಗಳನ್ನು ಕೆಟ್ಟದಾಗಿ ಹೇಳಿ ಹಾಸ್ಯ ಅನ್ನಬೇಡಿ, ಕಾರ್ತಿಕ ಅಂದ್ರೆ ಎಷ್ಟು ಕೆಟ್ಟದಾಗಿ ಕೊನೆಯಲ್ಲಿ ತಿಕ ಅಂತಿದೆ ಅಂತಾರೆ.... ಹೊಟ್ಟೆಗೆ ತಿಕದಲ್ಲಿ ಬರೋದನ್ನೇ ತಿಂತಾರೇನೋ mostly, n ತಲೆಯಲ್ಲೂ ಅವರಿಗೆ ಬುದ್ಧಿ ಬದಲು ತಿಕದಲ್ಲಿ ಇರೋದೇ ಇಟ್ಕೊಂಡು ಇಂಥವೆಲ್ಲ joke ಅಂತ ಮಾಡಿ ನಗ್ತಾವೇನೋ 😡

ದೇವರು ಅಂದ್ರೆ ಎಷ್ಟೋ ಜನಕ್ಕೆ ನಂಬಿಕೆ, ಧೈರ್ಯ, ಶಕ್ತಿ, ಅದೇ ಅವರ ಎಷ್ಟೋ ಖಾಯಿಲೆಗಳಿಗೆ ಔಷಧಿ... Comedy ವಸ್ತುವಲ್ಲ.

____________________________________________


ಅವನು ಹುಟ್ಟೇ ಹೋರಾಟವಾಗಿತ್ತು,

ಅಸುರ ಸಂಹಾರಕ್ಕೆ ಅಂತಾನೇ ಹುಟ್ಟಿದವನು ಅವನು.

ಶೂರ, ಪರಾಕ್ರಮಿ, ಸುಂದರ...

ಬ್ರಹ್ಮ, ಶಿವರಿಗೆ ಗುರು ಆಗುವಂಥ ಬುದ್ಧಿವಂತ ನಿಜ... ಆದ್ರೆ ಬ್ರಹ್ಮ ದೇವ ದೊಡ್ಡವರು, ಹಿರಿಯರು ಅನ್ನೋದನ್ನು ನೋಡದೆ ಕೈ ಮಾಡಿ ತನ್ನನ್ನ ತಾನೇ ಸರ್ಪ ರೂಪ ಮಾಡಿಕೊಂಡ,

ಗಣೇಶ ಹೇಳಿದ್ದು ಸರಿಯೇ ಆಗಿತ್ತು... ಮಕ್ಕಳಿಗೆ ಅವರಿಗಾಗಿ everything n anything ಬೇಕಾದ್ರೂ ಮಾಡೋ ತಂದೆ ತಾಯಿಯೇ ಮೊದಲು, ತಂದೆ ತಾಯಿಯೇ ಎಲ್ಲಾ, ತಂದೆ ತಾಯಿಯೇ ದೇವರು, ಅವರೇ ಪ್ರಪಂಚ, ಅಣ್ಣ ಹೀಗೆ ಯೋಚನೆ ಮಾಡಿದ ಅಂದಾಗ ಅಣ್ಣನ wisdom, maturity ಮೆಚ್ಚಿ ಅಣ್ಣನ ಗೆಲುವನ್ನ ಸಂಭ್ರಮಿಸಿ ಎಲ್ಲರ ಜೊತೆ ಇರಬಹುದಿತ್ತು, ಆದ್ರೆ ತನಗೆ ಮೋಸ ಆಯ್ತು ಅಂತ ಎಲ್ಲರಿಂದ ದೂರ ಆಗ್ತಾರೆ.


ದೇವರನ್ನ ಸರಿ/ತಪ್ಪು ಅಂತಿಲ್ಲ, ಅಲ್ಲಿ ಪ್ರತಿಯೊಂದಕ್ಕೂ ಕಾರಣ ಇರುತ್ವೆ. ಒಂದು ಪುರಾಣ ಬರೀ 1 ಕಥೆಯಾಗಿರಲ್ಲ, ಆ ಕಥೆಗಳಲ್ಲಿ ನಮಗೆ ಸರಿ ದಾರಿ ತೋರಿಸೋ ಬೇಕಾದಷ್ಟು ಪಾಠಗಳು ಇರ್ತವೆ 🥰

Comments

Rated 0 out of 5 stars.
No ratings yet

Add a rating
bottom of page