ನಮ್ಮಲ್ಲಿ ನಾವೇ ಬೆಳೆಸಿಕೊಂಡ ಕೆಟ್ಟತನ ನಮ್ಮನ್ನ ಸೋಲಿಸೋ ಮೊದಲು ನಾವು ಅವುಗಳನ್ನ ಸೋಲಿಸಿ ಒಳ್ಳೆಯವರಾಗಬೇಕು...🙏🏼 Rama Spirit to Overcome the Ravana Within Us
- Sep 6, 2025
- 1 min read

Rama Spirit to Overcome the Ravana Within Us
ಪ್ರಭು ಶ್ರೀರಾಮ ಎಲ್ಲರಿಗೂ ಗೊತ್ತು...🏹🚩
ಸಾಕ್ಷಾತ್ ಶ್ರೀ ಹರಿಯ ಅವತಾರ...🙏🏼🙏🏼
ಅವನು ಮರ್ಯಾದಾ ಪುರುಷ, ಪುರುಷೋತ್ತಮ,
ಆದರ್ಶ ಪುತ್ರ-ಅಣ್ಣ-ಪತಿ-ರಾಜ 🥰🙏🏼🙏🏼
ಆದ್ರೆ ಅವರಿಂದ ಸೋತ ಹತನಾದ ರಾವಣ .....⁉️
ಸಾಮಾನ್ಯ ಏನಲ್ಲ,
ಹುಟ್ಟಿನಿಂದಲೇ ಅವನು ಬ್ರಾಹ್ಮಣ+ರಾಕ್ಷಸ, ಬ್ರಹ್ಮರಾಕ್ಷಸ.
ಸ್ವರ್ಣ ಲಂಕಾಧಿಪತಿ.
ವೇದ, ಜ್ಯೋತಿಷ್ಯಶಾಸ್ತ್ರಗಳಲ್ಲಿ expert...👍🏼👍🏼
ರಾವಣ ಸಂಹಿತ, ಅರ್ಕಾ ಪ್ರಕಾಶಂ ಕೃತಿಗಳ ರಚನಕಾರ...👍🏼👍🏼
ನಮಗೆಲ್ಲ ಓದೋಕು ಕಷ್ಟ ಅನ್ನಿಸೋ "ಶಿವ ತಾಂಡವ"ವನ್ನು ರಚಿಸಿದ್ದು ಇವರೇ ಅಂದ್ರೆ ಇವರ ಪಾಂಡಿತ್ಯ ಎಂತದ್ದು ಗೊತ್ತಾಗುತ್ತೆ...👍🏼👍🏼
ಶಕ್ತಿ, ಪರಾಕ್ರಮ ಅಂತ ಬಂದ್ರೆ ಕೈಲಾಸವನ್ನೆ ಎತ್ತಿದವರು..👍🏼👍🏼
ಕರುಳನ್ನೆ ಕಿತ್ತು ವೀಣೆಯ ತಂತಿ ಮಾಡಿ ನುಡಿಸಿದ ವೈಣಿಕ..👍🏼👍🏼
ಎಂತಾ ಶಿವಭಕ್ತ, ಹಠವಾದಿ ಅಂದ್ರೆ ತಾಯಿಯ ಪೂಜೆಗಾಗಿ ಸಾಕ್ಷಾತ್ ಶಿವನನ್ನೇ ವಲಿಸಿಕೊಂಡು ಆತ್ಮ ಲಿಂಗವನ್ನು ಇಸ್ಕೊಂಡು ಬಂದಿದ್ರು..👍🏼👍🏼
ಕೈಯಲ್ಲಿ ಸಾಕ್ಷಾತ್ ಶಿವನ ಆತ್ಮಲಿಂಗವೇ ಇದ್ರೂ ಒಂದೇ ಒಂದು ದಿನದ ಸಂಧ್ಯಾವಂದನೆ miss ಮಾಡದೆ ಇರೊವಷ್ಟು ಶಾಸ್ತ್ರ ಪರಿಪಾಲನೆ ಮಾಡ್ತಿದ್ದವರು..👍🏼👍🏼
ಪ್ರಜೆಗಳ ಪಾಲಿಗೆ ಅವರೊಬ್ಬ ಅದ್ಭುತ ರಾಜ, ಈಗಲೂ ಅಲ್ಲಿನ ಜನ ಪೂಜೆ ಮಾಡ್ತಾರಂತೆ...,
ಕೊನೆಯಲ್ಲಿ ಸಾಯುವ ಮುನ್ನ ಅವರಿಂದ ಜ್ಞಾನವನ್ನು ಪಡ್ಕೋ ಅಂತ ಸಾಕ್ಷಾತ್ ಶ್ರೀರಾಮ ತನ್ನ ತಮ್ಮ ಲಕ್ಷ್ಮಣನಿಗೆ ಹೇಳ್ತಾರಂತೆ...👍🏼👍🏼
____________________________________________
ಇಷ್ಟೆಲ್ಲಾ ಇದ್ದೂ ರಾವಣ ಗೆಲ್ಲೋಕೆ ಆಗ್ಲಿಲ್ಲ,
ಶಿವ ಭಕ್ತನಾದರು, ಶಿವನ ಪಕ್ಕದಲ್ಲಿದ್ದ ಜಗನ್ಮಾತೆಯಲ್ಲಿ ಮಾತೆಯನ್ನ ಕಾಣದೆ ಅವಳ ರೂಪ ನೋಡಿ ಅವಳನ್ನೇ ಮೋಹಿಸಿದರು,
ತಮ್ಮ ಕುಬೇರನ ಸೊಸೆ ಅಂದಮೇಲೆ ತನಗೂ ಸೊಸೆ, ಮಗಳ ಸಮಾನ ಅನ್ನೋದನ್ನ ಮರೆತು ರಂಬೆಯನ್ನ ಬಲತ್ಕರಿಸಿದ್ರು, ಪರಸ್ತ್ರೀ ಅಂತ ಗೊತ್ತಿದ್ರೂ ಸೀತೆಯನ್ನು ಸಹೋದರಿ ಅಂದುಕೊಳ್ಳದೆ ಅಪಹರಿಸಿದ್ರು...,
ಅಂದ್ರೆ ನಮ್ಮಲ್ಲಿ ಒಳ್ಳೇದು ಎಷ್ಟಿದೆ ಅನ್ನೋದು matter ಆಗಲ್ಲ..., ಎಷ್ಟೇ ಒಳ್ಳೇದು ಇದ್ರೂ, ನಮ್ಮಲ್ಲಿ ಸ್ವಲ್ಪ ಕೆಟ್ಟತನ ಇದ್ರೂ ಅದು ನಮ್ಮನ್ನ ಗೆಲ್ಲೋಕೆ ಬಿಡಲ್ಲ, ಸೋಲಿಸುತ್ತೆ.
For example, ಪಾತ್ರೆ ತಳದಲ್ಲಿ ತೂತು ಮಾಡಿ ಪಾತ್ರೆ ತುಂಬಾ ಅಮೃತ ತುಂಬಿಸಿದ ಹಾಗೆ... ಅದು ಅಮೃತಾನೆ ಆದ್ರೂ ಸೋರಿ ಹೋಗುತ್ತೆ.
ನಮ್ಮಲ್ಲಿ ನಾವೇ ಬೆಳೆಸಿಕೊಂಡ ಕೆಟ್ಟತನ ನಮ್ಮನ್ನ ಸೋಲಿಸೋ ಮೊದಲು ನಾವು ಅವುಗಳನ್ನ ಸೋಲಿಸಿ ಒಳ್ಳೆಯವರಾಗಬೇಕು...🙏🏼
ನಮ್ಮಲ್ಲಿರವ ರಾವಣನನ್ನು ನಮ್ಮಲ್ಲಿರುವ ರಾಮನಿಂದಲೇ ಅಂತ್ಯ ಮಾಡಬೇಕು 🏹🔥🚩



Comments