satya-yuga ಸತ್ಯ ಯುಗದಲ್ಲೂ ರಾಕ್ಷಸರು ಇದ್ರು
- DENIL

- Sep 6, 2025
- 2 min read

ಸತ್ಯ ಯುಗದಲ್ಲೂ ರಾಕ್ಷಸರು ಇದ್ರು Demons in the Era of Truth satya-yuga
ಅನ್ನೋದಕ್ಕೆ ಸಮುದ್ರ ಮಥನದ ಸಾಕ್ಷಿ,
ಮಹಾವಿಷ್ಣು ವರಾಹ ಅವತಾರ ಎತ್ತಿದ್ದು ಹಿರಣ್ಯಾಕ್ಷನಿಗಾಗಿ,
ನರಸಿಂಹ ಆಗಿದ್ದು ಹಿರಣ್ಯಕಶಪುವಿಗಾಗಿ,
ತ್ರೇತಾಯುಗದ ಬಲಿ ಚಕ್ರವರ್ತಿವಾಗಿ ವಾಮನನಾಗಿ ಬಂದ,
ಕಾರ್ಥ್ಯವೀರಾರ್ಜುನ n ಅಂತ ದುರಹಂಕಾರಿ ರಾಜರಿಗಾಗಿ ಪರಶುರಾಮನಾದ,
ರಾಮನಾಗಿ ರಾವಣನ ಅಂತ್ಯ ಮಾಡಿದ,
ಕೃಷ್ಣನಾಗಿ ಕಂಸನ ಸಂಹಾರ, ಎಷ್ಟೋ ಸಾಲು ಸಾಲು ರಾಕ್ಷಸರನ್ನು ವಧಿಸಿದ...., ದುರ್ಮಾರ್ಗದಲ್ಲಿ ನಡೆದವರನ್ನ ಅಳಿಸಿ ಧರ್ಮವನ್ನ ಉಳಿಸಿದ 🙏🏼
____________________________________________
ಧರ್ಮ....?
ನಮ್ಮಲ್ಲಿ ಕೆಲವರ ಪ್ರಕಾರ ಧರ್ಮ ಅಂದ್ರೆ religion column ಅಲ್ಲಿ ಬರೆಯೋ ಹಿಂದೂ/ ಮುಸ್ಲಿಂ/ ಕ್ರೈಸ್ತ/ ಅಥವಾ ಬೇರೆ ಯಾವುದೋ, ಅಷ್ಟೇ.
ನಾವು ಸನಾತನಿಗಳು... 1000,2000 ವರ್ಷ ಅಲ್ಲ,
5000, 7000, ಹತ್ತಾರೂ ಸಾವಿರ ವರ್ಷಗಳ, ಯುಗ ಯುಗಗಳ ಇತಿಹಾಸ ಇದೆ, ಆಗ ಪ್ರಪಂಚದಲ್ಲಿ ಈಗಿನ ಈ ಬೇರೆ ಬೇರೆ ಹೆಸರಿನ ಯಾವ ಧರ್ಮಗಳೂ ಇರಲೇ ಇಲ್ಲ ಅಲ್ವಾ?
ನಮ್ಮ ಧರ್ಮದವರು ಅಂದ ಮಾತ್ರಕ್ಕೆ ಅವರು ಮಾಡಿದ್ದನ್ನೆಲ್ಲ ಸರಿ ಅನ್ನಬೇಕು ಅಂದ್ರೆ ಸಹಸ್ರಬಾಹು, ಹಿರಣ್ಯಾಕ್ಷ ಹಿರಣ್ಯಕಶಿಪು, ರಾವಣ, ಕಂಸ, ಕೀಚಕ, ದುರ್ಯೋಧನ, ದುಶ್ಯಾಸನ ಎಲ್ಲರಿಗೂ ಯಾಕೆ ಶಿಕ್ಷೆ ಕೊಟ್ಟ ದೇವರು? ಅಷ್ಟೇ ಯಾಕೆ... ನರಕಾಸುರ ಸ್ವತಃ ಭೂದೇವಿ, ವರಾಹ ಸ್ವಾಮಿ ಮಗ, ಆದ್ರೂ ಎಂತಾ ಕೆಲಸ ಮಾಡ್ತಿದ್ರು 😢
ನನ್ನ ಪ್ರಕಾರ ಸರಿ is ಧರ್ಮ, ತಪ್ಪು is ಅಧರ್ಮ.
ಯಾರೇ ಮಾಡಿದ್ರೂ ತಪ್ಪು ತಪ್ಪೇ...
ಅವ್ರು ನಮಗೆ ಬೇಕಾದವರು/ಬೇಡವಾದವ್ರು,
ಪರಿಚಿತರು/ಅಪರಿಚಿತರು,
ಸ್ನೇಹಿತರು/ಸಂಬಂಧಿಗಳು,
ನಮ್ಮ ಜಾತಿಯವರು/ನಮ್ಮ ಧರ್ಮದವರು,
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ॥
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್।
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ॥
ಕೃಷ್ಣ ಗೀತೆಯ 4ನೇ ಅಧ್ಯಾಯದಲ್ಲಿ ಹೇಳಿದ್ದು,
ಯಾವಾಗ ಧರ್ಮಕ್ಕೆ ಚ್ಯುತಿ ಬರುತ್ತೋ, ಕೆಟ್ಟದ್ದನ್ನು ಮಾಡೋ ದುಷ್ಟರನ್ನು ಅಳಿಸಿ ಒಳ್ಳೆಯವರನ್ನು ಕಾಪಾಡೋಕೆ ನಾನ್ ಮತ್ತೇ ಮತ್ತೇ ಬರ್ತೀನಿ ಅಂತಾನೇ ಹೊರತು same religion ಅವ್ರು ಏನ್ ಮಾಡಿದ್ರೂ ಸರಿ ಅಂತ ಬಿಟ್ಟು ಬೇರೆ religion ತಪ್ಪು ಮಾಡಿದಾಗ ಮಾತ್ರ punish ಮಾಡ್ತೀನಿ ಅಂತಲ್ಲ.
As per ಕೃಷ್ಣ ಧರ್ಮ ಅಂದ್ರೆ duty, ಕರ್ತವ್ಯ... 🙏🏼
ನಿನ್ನ needsಗೆ, responsibilities fulfill ಮಾಡೋಕೆ ನ್ಯಾಯವಾಗಿ ದುಡಿದು ತಿನ್ನು, ಆದ್ರೆ ಧಾನ ಮಾಡು but ಕಿತ್ಕೊಬೇಡ, ನಂಬಿಸಿ ದ್ರೋಹ ಮಾಡಬೇಡ, ವಿನಾ ಕಾರಣ ನೋಯಿಸಬೇಡ, ಮೋಸ ಅನ್ಯಾಯ ಮಾಡದೇ ನೀಯತ್ತಾಗಿ ಇರು ಇಷ್ಟೇ,
ಹೀಗಿದ್ರೆ ಧರ್ಮ..., ಇವುಗಳನ್ನ ತಪ್ಪಿದ್ರೆ ಅಧರ್ಮ ಅಲ್ವಾ...?
ದೇವರೇ ಹೀಗೆ ಯೋಚನೆ ಮಾಡುವಾಗ ನಾವು ಮಾತ್ರ ಹೇಗೆ ತಪ್ಪು ಮಾಡಿದವರ religion name ನೋಡಿ ಇವ್ರು ನಮ್ಮವರು so ನಾವು ಇವರ ತಪ್ಪನ್ನೂ ಸಮರ್ಥಿಸಿಕೊಳ್ಳಬೇಕು, ಬೇರೆ religion ಅವರನ್ನ ಮಾತ್ರ judge ಮಾಡಬೇಕು ಅನ್ನೋಕಾಗುತ್ತೆ?
ನಂಗಂತೂ ನಮ್ ಮನೆ ಆಚೆ ಬೇರೆ ಯಾರದ್ದೋ ಮನೆಯಲ್ಲಿರೋ ಕಸಕ್ಕಿಂತ ನಮ್ಮ ಮನೆ ಒಳಗಿರೋ ಕಸದಿಂದ ಹೆಚ್ಚು ಕೋಪ ಬರುತ್ತೆ,
ಇದನ್ನ ಬೇರೆಯವರು ಕಸದ ಮೇಲಿನ ದ್ವೇಷ ಅಂದುಕೊಂಡ್ರೆ ನಾನು ನನಗೆ ನನ್ನ ಮನೆ ಮೇಲಿರೋ ಪ್ರೀತಿ, ಕಾಳಜಿ ಅಂತೀನಿ 🚩🙏🏼
ಧರ್ಮೋ ರಕ್ಷತಿ ರಕ್ಷಿತಃ...
ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮನ್ನ ರಕ್ಷಿಸುತ್ತೆ,
ಧರ್ಮದ ರಕ್ಷಣೆ ಅಂದ್ರೆ ಕತ್ತಿ ಗುರಾಣಿ ಹಿಡಿದು ಯುದ್ಧ ಮಾಡೋದು, ಅಥವಾ ಕೂಗಿ ಕೂಗಿ ಭಾಷಣ ಮಾಡೋದಲ್ಲ.
ನಾವು ಧರ್ಮದ ಆದರ್ಶಗಳನ್ನ ಪಾಲಿಸಿದ್ರೆ ಆಗ ಅಧರ್ಮ ಅನ್ನೋದೇ ಇರಲ್ಲ... ಎಲ್ಲರೂ ಧರ್ಮಾತ್ಮರಾದ್ರೆ ಆಗ ಯಾರಿಂದ ಯಾರಿಗೂ ತೊಂದ್ರೇನೆ ಆಗಲ್ಲ, ರಕ್ಷಣೆಯ ಅವಶ್ಯಕತೆನೇ ಇರಲ್ಲ , simple



Comments