SRI RAM ರಾಮನನ್ನು ಮದುವೆ ಆಗಿ ಸೀತೆ ನೋವು ಅನುಭವಿಸಿದ್ಲು,
- Sep 6, 2025
- 3 min read

ಸಾವಿರಾರು ಜನ ಸಿಗಬಹುದು...,
ರಾಮನನ್ನು ಮದುವೆ ಆಗಿ ಸೀತೆ ನೋವು ಅನುಭವಿಸಿದ್ಲು,
ರಾಮ ಹೆಂಡತಿಗೆ ಕಷ್ಟ ಕೊಟ್ಟ, ಪತ್ನಿ ಪೀಡಕ ಅನ್ನೋವ್ರು. SRI RAM
ಆದ್ರೆ ಈಗಲೂ ಕೋಟ್ಯಂತರ ಜನ ಇದಾರೆ.... ಪೂರ್ತಿ ರಾಮಾಯಣ ಗೊತ್ತಿದ್ದೂ ಮಗಳ ಮದುವೆ ಮಾಡುವಾಗ ಸೀತಾ ಸ್ವರೂಪ ಕನ್ಯೆಯನ್ನು ರಾಮ ಸ್ವರೂಪ ವರನಿಗೆ ಅಗ್ನಿ ಸಾಕ್ಷಿಯಾಗಿ ಧಾರೆ ಎರೆದು ಕೊಡ್ತಿದೀನಿ ಅನ್ನೋವ್ರು 🥰🙏🏼
ಯಾಕೆ ಅವರಿಗೆ ಮಗಳು ಕಷ್ಟ ಪಡಲಿ ಅಂತ ಆಸೆ ಇರುತ್ತಾ? ಮಗಳು ಅಳಿಯ ದೂರ ಆಗಲಿ ಅಂತ ಬಯಸ್ತಾರಾ?
No... ದಾಂಪತ್ಯ ಅನ್ನೋದು ಬರೀ ಸೌಕರ್ಯ, ಸಂಪತ್ತುಗಳಿಗಾಗಿ ಮಾಡಿಕೊಳ್ಳೋ ವ್ಯವಹಾರ ಅಲ್ಲ.
ರಾಮನನ್ನ ಮದುವೆ ಆದ ಸೀತೆಗೆ ಅಷ್ಟೆಲ್ಲಾ ಕಷ್ಟ ಆಗಿದ್ದು ಗೊತ್ತಿದ್ದೂ ಮತ್ಯಾಕೆ ಜನ ರಾಮ ನಂತಹ ಗಂಡಾನೇ ಬೇಕು ಅನ್ನೋದು...?
____________________________________________
ರಾಮ ಸೀತೆಯ ಜೊತೆ ಅರಮನೆಯಲ್ಲಿ ಇದ್ದಾಗಲೂ...,
ಅರಮನೆ ಬಿಟ್ಟು ವನವಾಸಕ್ಕೆ ಕಾಡಿಗೆ ಹೋದಾಗಲೂ...,
ಸೀತೆ ರಾವಣನಂತ ದುಷ್ಟನ ಸೆರೆಯಲ್ಲಿ ಇದ್ದಾಗಲೂ...,
ಮತ್ತೆ ಸೀತೆ ರಾಮನನ್ನು ಬಿಟ್ಟು ಒಬ್ಬಳೇ ಕಾಡಿಗೆ ಹೋಗಿ ರಾಮ ಅರಮನೆಯ ಸಕಲ ವೈಭೋಗಗಳ ಮಧ್ಯ ರಾಜನಾಗಿ ಇದ್ದಾಗಲೂ... ರಾಮ ಯಾವ ಜಾಗದಲ್ಲೇ, ಯಾವ ಮನಸ್ಥಿತಿಯಲ್ಲೇ, ಯಾವ ಪರಿಸ್ಥಿತಿಯಲ್ಲೇ ಇದ್ರೂ ರಾಮನ ಮನಸ್ಸಿನಲ್ಲಿ ಸೀತೆಯ ಜಾಗ ಬದಲಾಗಲಿಲ್ಲ.... ಹೇಗೆ ಶ್ರೀಹರಿಯ ವಕ್ಷಸ್ಥಾನದಲ್ಲಿ ಸದಾ ಶ್ರೀಲಕ್ಷ್ಮಿನೇ ಇರ್ತಾಳೋ ಹಾಗೆ ರಾಮನ ಪಕ್ಕದಲ್ಲಿ ಸೀತೆ ಇಲ್ಲದಿದ್ದರೂ ರಾಮನ ಮನಸ್ಸಲ್ಲಿ ಸೀತೆ'ನೇ ಇರ್ತಾಳೆ ❤️
ದೇಹ ಸುಖಕ್ಕಾಗಿ, ಒಬ್ಬರೇ life partner ಜೊತೆ ಇದ್ದು bore ಆಯ್ತು ಅಂತ ಎಷ್ಟು ಜನ life partnerಗೆ physically, mentally ಮೋಸ ಮಾಡ್ತಾ ಇರ್ತಾರೆ..., ಅಂತವರ ಮಧ್ಯ ಒಬ್ಬರಿಗೇ loyal ಆಗಿರೋ ರಾಮನಂತವರು ಸಿಗಲಿ ಅಂತಾನೇ ಎಲ್ಲರೂ ಬಯಸೋದು.
____________________________________________
ರಾವಣ ಕದ್ದೋಯ್ದಾಗ ಹೆಂಡತಿಯನ್ನ ಕಾಪಾಡಿ ಕರ್ಕೊಂಡು ಬರಬೇಕಾದದ್ದು ಗಂಡನ ಧರ್ಮ, ಕರ್ತವ್ಯ.
ಅದಕ್ಕೆ ರಾಮ ಅಸಾಧ್ಯ ಅನ್ನಿಸೋದನ್ನ ಸಾಧಿಸಿ, ಸಮುದ್ರಕ್ಕೆ ಸೇತುವೆ ಕಟ್ಟಿಸಿ ಲಂಕೆಗೆ ಹೋಗಿ ಸ್ವರ್ಣಲಂಕಾಧಿಪತಿಯನ್ನ ಸೋಲಿಸಿ ಸೀತೆಯನ್ನ ಕರ್ಕೊಂಡು ಬಂದ.
ನಮ್ಮ ಸುತ್ತಾನೇ ಎಷ್ಟು ಜನ ಹೆಂಡತಿಗಾಗಿ ಕಷ್ಟ ಪಟ್ಟವರು ಇದಾರೆ, ಎಷ್ಟು ಜನ ಕಷ್ಟ ಅಂತ ಹೆಂಡತಿಯನ್ನ ಬಿಟ್ಟು ಓಡಿದವರು ಇದಾರೆ ನಾವೇ ಲೆಕ್ಕ ಹಾಕುವ... ಹಾಗಿರುವಾಗ ಅದೇನೇ ಅಪಾಯ ಎದುರಾದರೂ ಹೆಂಡತಿಯನ್ನ ಕಾಪಾಡ್ತೀನಿ ಅನ್ನೋ ರಾಮನಂತವರು ಸಿಗಲಿ ಅಂತಾನೇ ಎಲ್ಲರೂ ಬಯಸೋದು.
____________________________________________
ರಾವಣ ಶಿವನನ್ನ ತಂದೆ ಅಂದು ಪಕ್ಕದಲ್ಲಿದ್ದ ಪಾರ್ವತಿಯನ್ನು ತಾಯಿ ಅನ್ನದೆ ಅವಳನ್ನೇ ಮೋಹಿಸಿದವನು, ರಂಬೆ ನಾನು ನಿಮ್ಮ ತಮ್ಮ ಕುಬೇರನ ಮಗ ನಳಕುವರನನ್ನ ಮದುವೆ ಆಗಿದ್ರಿಂದ ನಾನು ನಿಮಗೂ ಸೊಸೆ ಅಂದ್ರೆ ಮಗಳ ಸಮಾನ ಅಂದ್ರೂ ಬಿಡದೆ ಅವಳ ಜೊತೆ ಕೆಟ್ಟದಾಗಿ ನಡ್ಕೊಂಡು ಶಾಪಕ್ಕೆ ಗುರಿಯಾದವನು... ಅಂತವರ ಸೆರೆಯಲ್ಲಿ ಇದ್ದು ಬಂದವರು ಅಂದ್ರೆ ಅನುಮಾನ ಪಡಬಹುದಿತ್ತು,
ಆದ್ರೆ ರಾವಣ ಎಂತವನೆ ಆಗಿರಲಿ..., ರಾಮನಿಗೆ ಸೀತೆಯ ಮೇಲೆ ನಂಬಿಕೆ ಇತ್ತು, ನನ್ನ ಸೀತೆ ನನ್ನನ್ನಲ್ಲದೆ ಬೇರೆ ಯಾರನ್ನೂ ಒಪ್ಪಲ್ಲ, ಅಗ್ನಿಗಿಂತ ಪವಿತ್ರವಾದವಳು, ಸ್ವರ್ಣ ಲಂಕೆಯ ರಾಣಿ ಮಾಡ್ತೀನಿ ಅಂದ್ರೂ ಒಪ್ಪಲ್ಲ, ರಾಕ್ಷಸಿಯರು ತಿಂತೀವಿ ಅಂದ್ರೂ ಒಪ್ಪಲ್ಲ ಅನ್ನೋ ನಂಬಿಕೆ ಇತ್ತು.
ಅಣ್ಣ, ತಮ್ಮ, friend ಅಂತ ಪರಿಚಯದವರು, ಸಂಬಂಧಿಗಳು, colleagues ಜೊತೆ ಮಾತಾಡಿದ್ರು ಕೆಟ್ಟ ಸಂಬಂಧ ಕಟ್ಟಿ ಮಾತಾಡೋ ಜನರ ಮಧ್ಯ, Social media ಅಲ್ಲಿ comments ಮಾಡೋವ್ರು ಯಾರು, messaging app ಅಲ್ಲಿ hi ಅಂದವರು ಯಾರು, call ಮಾಡಿದ್ದು ಯಾರು ಅಂತ ಎಲ್ಲವನ್ನೂ ಅನುಮಾನದಿಂದ ನೋಡ್ತಾ ಹೆಂಡತಿಗೆ ಹಿಂಸೆ ಮಾಡೋವ್ರ ನಡುವೆ ನನ್ನ ಹೆಂಡ್ತಿ ಮೇಲೆ ನಂಗೆ ನಂಬಿಕೆ ಇದೆ ಅನ್ನೋ ರಾಮನಂತವರು ಸಿಗಲಿ ಅಂತಾನೇ ಎಲ್ಲರೂ ಬಯಸೋದು.
____________________________________________
ಎಲ್ಲಾ ಮುಗೀತು... ಕೊನೆಗೆ ಜನರ ಸಮಾಧಾನಕ್ಕೆ ಸೀತೆ ಒಬ್ಬಳೇ ಕಾಡಿಗೆ ಹೋಗಿದ್ದೂ ಆಯ್ತು.
ಆಗ ರಾಮ ಅಯೋಧ್ಯೆಯ ಮಹಾರಾಜ,
ರಾಜ ಸಂತಾನಕ್ಕಾಗಿ ಬಹು ಪತ್ನಿಯರನ್ನು ಹೊಂದಬಹುದು, ಅದು ತಪ್ಪಲ್ಲ ಅಂತಿದ್ದಾಗ ಮದುವೆ ಆಗಿದ್ರೆ?
ಧರ್ಮ ಕಾರ್ಯಗಳನ್ನ ಮಾಡೋಕೆ ಜೊತೆಯಲ್ಲಿ ಧರ್ಮ ಪತ್ನಿ ಬೇಕು ಅಂತ ಸೀತೆಯ ಸ್ವರ್ಣ ಮೂರ್ತಿ ಮಾಡಿ ಕೂರಿಸಿಕೊಳ್ಳೋ ಬದಲು ಇನ್ನೊಂದು ಮದುವೆ ಆಗಿದ್ರೆ?
ಯಾರು ಬೇಡ ಅಂತಿದ್ರು? ಯಾರು ತಪ್ಪು ಅಂತಿದ್ರು?
ಏಕ ಪತ್ನಿವ್ರತಸ್ತನಾಗಿರ್ತೀನಿ ಅಂತ ಸೀತೆಗೆ ಕೊಟ್ಟ ಮಾತನ್ನ ಕೊನೆವರೆಗೂ ಪಾಲಿಸಿದ ರಾಮನಂತವರು ಸಿಗಲಿ ಅಂತಾನೇ ಎಲ್ಲರೂ ಬಯಸೋದು.
____________________________________________
ಸರೀ... ಸೀತೆ ಕಾಡಲ್ಲಿ, ರಾಮ ಅರಮನೆಯಲ್ಲಿ ರಾಜನಾಗಿ ಇದ್ದಾಗ ರಾಮ ಹೇಗಿದ್ದ...? ಅರಮನೆ ಊಟ ಮಾಡ್ತಾ, ಸುಖದ ಸುಪ್ಪತ್ತಿಗೆಯಲ್ಲಿ?
No... ಸೀತೆಗೆ ಸಿಗದ ಯಾವ ಸುಖವನ್ನೂ ರಾಮ ಅನುಭವಿಸಿಲ್ಲ, ರಾಜನಾಗಿ ಕರ್ತವ್ಯ ನಿಭಾಯಿಸಿ ಸಿಂಹಾಸನದಿಂದ ಇಳಿದು ಖಾಸಗಿ ಜೀವನಕ್ಕೆ ಕಾಲಿಡ್ತಿದ್ದ ಹಾಗೆ ನಾರು ಮಡಿ ತೊಟ್ಟು ಹಣ್ಣು ಗೆಡ್ಡೆ ಗೆಣಸು ತಿಂದು ನೆಲದ ಮೇಲೆ ಮಲಗ್ತಾ ಇದ್ರಂತೆ.... ಎಲ್ರೀ ಸಿಗ್ತಾರೆ ಇಂಥವರು?
ಹೆಂಡತಿ ಹೇಗಾದ್ರೂ ಇರಲಿ, ಮೊದಲು ನಾನ್ ಸುಖವಾಗಿ ಇರ್ಬೇಕು ಅನ್ನೋವ್ರ ನಡುವೆ ರಾಮನಂತವರು ಸಿಗಲಿ ಅಂತಾನೇ ಎಲ್ಲರೂ ಬಯಸೋದು.
____________________________________________
____________________________________________
ರಾಮ ಮಾತ್ರ ಅಲ್ಲ...
ಸೀತೆ ಕೂಡಾ ರಾಮನಷ್ಟೇ ಒಳ್ಳೆಯವಳು
ಯಾರು ಹೇಳಿದ್ರು ಸೀತೆಗೆ ರಾಮನ ಜೊತೆ ವನವಾಸಕ್ಕೆ ಹೋಗು ಅಂತ? ಹೋಗದೆ ಅಯೋಧ್ಯೆಯ ಅರಮನೆಯಲ್ಲಿ ಬೇಡ್ವಾ ಮಿಥಿಲೆಗೆ ಹೋಗಿ ರಾಮ ಬರೋವಾರೆಗೂ ಆರಾಮಾಗಿ ಇದ್ದಿದ್ರೆ ಯಾರು ಬೇಡ ಅಂತಿದ್ರು?
ಆದ್ರೂ ರಾಮ ಇದ್ದಲ್ಲಿ ನಾನು ಇರ್ತೀನಿ... ಅದೇ ನನ್ನ ಧರ್ಮ ಅಂತ ಹಿಂದೆ ನಡೆದವಳು ಸೀತೆ.
ರಾಮಾಯಣ ಓದಿದವರಿಗೆ ಗೊತ್ತಿರುತ್ತೆ...,
ಅಗ್ನಿ ಪರೀಕ್ಷೆ ಆಗಿದ್ದು ರಾಮನಿಗೆ ಸೀತೆ ಮೇಲೆ ಅನುಮಾನ ಇತ್ತು ಅಂತಲ್ಲ, ನಾಳೆ ಜನ ಸೀತೆಗೆ ಏನೂ ಅನ್ನಬಾರದು ಅನ್ನೋ ಕಾಳಜಿಗೆ ಅಂತ,
ರಾಮ ಯಾವತ್ತೂ ಸೀತೆಯನ್ನ ಅನುಮಾನಿಸಿಲ್ಲ ಅನ್ನೋದನ್ನ ಸ್ವರ್ಗವಾಸಿಯಾದ ದಶರಥ ಮಹಾರಾಜರೇ ಸೊಸೆಗೆ ತಿಳಿಸಿ ಹೇಳ್ತಾರೆ. ಖಾಲಿ ಪೀಲಿಗಳಿಗೆ ಅದೆಲ್ಲ ಗೊತ್ತಿಲ್ಲ, ಸುಮ್ನೆ ಲಬ್ ಲಬ್ ಅಂತವೆ, ಅದು ಬಿಡಿ...
ಸರಿ, ರಾಮ ಲಕ್ಷ್ಮಣ ಸೀತೆ ಅಯೋಧ್ಯೆಗೆ ಬಂದಾಯ್ತು, ಭರತ ಆಶ್ರಮ ಬಿಟ್ಟು ಬಂದಾಯ್ತು, ರಾಮನ ಪಟ್ಟಾಭಿಷೇಕ ಆಗಾಯ್ತು... ಸೀತೆ ಅಯೋಧ್ಯೆಗೆ ಮಹಾರಾಣಿ ಆಗಿ ಆಯ್ತು.
ತಾನು ರಾವಣನ ಮಾತಿಗೆ ಒಪ್ಪಿಬಿಟ್ಟಿದ್ರೆ ಈ ಯುದ್ಧವೇ ಆಗ್ತಾ ಇರಲಿಲ್ಲ ಅಲ್ವಾ ಅನ್ನೋ ಯೋಚನೆ ಕೂಡಾ ಮಾಡದೇ ತಾನು ಅಗ್ನಿ ಪರೀಕ್ಷೆ ಎದುರಿಸಿ ಗೆದ್ದು ಬಂದ್ರೂ ಕೆಲವು ಜನ ಈಗಲೂ ತನ್ನ ಬಗ್ಗೆ ಅನುಮಾನ ಪಡ್ತಾರೆ,
ತನ್ನಿಂದ ತನ್ನ ಗಂಡನ ಬಗ್ಗೆ ತುಚ್ಛವಾಗಿ ಮಾತಾಡ್ತಾರೆ, ಹಾಗಾಗಬಾರದು..., ಪ್ರಜೆಗಳು ರಾಜನನ್ನು ಗೌರವಿಸಬೇಕು, ಹಾಗಾಗಬೇಕು ಅಂದ್ರೆ ತಾನು ರಾಜನ ಜೊತೆ ಇರಬಾರದು ಅಂತ ರಾಮನಿಗೆ ನೀವು ನಿಮ್ಮ ಕರ್ತವ್ಯ ಮರಿಬೇಡಿ ಅಂತ ಹೇಳಿ ರಾಮನನ್ನು ಬಿಟ್ಟು ತಾನು ಕಾಡಿಗೆ ಹೊರಡ್ತಾಳೆ.
ರಾಮ ಏನ್ ಹೋಗಲ್ಲ ಅಂದಿಲ್ಲ, ಆದ್ರೆ ಪಟ್ಟಾಭಿಷೇಕ ಮಾಡುವಾಗ ಪ್ರಜೆಗಳ ರಕ್ಷಣೆ ಮಾಡ್ತೀನಿ ಅನ್ನೋ ಮಾತು ಕೊಟ್ಟಿದ್ದು ಮೀರಿ ಕರ್ತವ್ಯ ಭೃಷ್ಟನಾಗಿ ಹೆಂಡತಿ ಜೊತೆ ಹೋಗಿದ್ರೆ ರಾಮ ಬರೀ ಹೆಂಡತಿಗೆ ತಕ್ಕ ಒಳ್ಳೆ ಗಂಡ ಆಗ್ತಿದ್ದ, ಆದ್ರೆ ಸೀತೆಗೆ ಗೊತ್ತಿತ್ತು... ನಾವು ದೂರ ಇದ್ರೂ ನಂಗೆ ನನ್ನ ಗಂಡ, ನನ್ನ ಗಂಡನಿಗೆ ನಾನು ಒಳ್ಳೆ ಜೀವನ ಸಂಗಾತಿ ಆಗಿರ್ತೀವಿ ಆದ್ರೆ ಜನರಿಗೆ ಒಳ್ಳೆ ರಾಜ ಆಗ್ಬೇಕು ಅಂದ್ರೆ ರಾಮ ಇಲ್ಲಿ ಇರ್ಬೇಕು ಅಂತ, so ಅವ್ಳು ಪ್ರಜೆಗಳನ್ನು ಚೆನ್ನಾಗಿ ನೋಡಿಕೊಳ್ಳಿ ಅಂತ ರಾಮನನ್ನ ಅಲ್ಲೇ ಬಿಟ್ಟು ತಾನೇ ದೂರ ಹೋಗ್ತಾಳೆ... ರಾಮ ಸೀತೆಯನ್ನು ಕಾಡಿಗೆ ಕಳಿಸಲ್ಲ.
ಆದ್ರೆ ಸೀತೆ ರಾಮನ ಹಿಂದೆ ಹೋದ ಹಾಗೆ ರಾಮ ಎಲ್ಲವನ್ನೂ ಬಿಟ್ಟು ಸೀತೆಯ ಹಿಂದೆ ಹೋಗೋಕೆ ಆಗಲ್ಲ ನೋಡಿ... ಯಾಕಂದ್ರೆ ರಾಮ ಅಯೋಧ್ಯೆಯ ರಾಜ, ರಾಜನಿಗೆ ಸ್ವಂತ ಸಂಬಂಧ, ಸ್ವಂತ ಆಸೆ, ಸ್ವಂತ ಕನಸುಗಳು, ಸುಖ ದುಖಕ್ಕಿಂತ ಪ್ರಜೆಗಳು ಮುಖ್ಯ ಆಗ್ತಾರೆ.
.... ಅಷ್ಟೇ,
____________________________________________
ಎಲ್ಲಾ ಸೌಕರ್ಯ ಸಂಪತ್ತು ಕಡಿಮೆ ಆದ್ರೂ ನಡೆಯುತ್ತೆ,
ಆದ್ರೆ ಗಂಡ ಹೆಂಡತಿ ಮಧ್ಯ ಪ್ರೀತಿ, ನಂಬಿಕೆ, ಕಾಳಜಿ, ಗೌರವ ಇಲ್ಲ ಅಂದ್ರೆ ಜೀವನದಲ್ಲಿ ಸುಖವಾಗಿ ಇರೋಕೆ ಆಗುತ್ತಾ?
ನಿನ್ನ ಪ್ರೀತಿ ಮಾಡ್ತೀನಿ, ನಿಂಗೆ ಎಲ್ಲಾ ಕೊಡಿಸ್ತೀನಿ...
ಹಾಗೇ ನಿನ್ನ ಜೊತೆ ಇನ್ನೊಬ್ಬಳನ್ನೂ/ ಇನ್ನೊಬ್ಬನನ್ನೂ ಪ್ರೀತಿ ಮಾಡ್ತೀನಿ, ಅವರ ಜೊತೆನೂ ಇರ್ತೀನಿ ಅಂದ್ರೆ ನೆಮ್ಮದಿ ಇರುತ್ತಾ?
ಮದುವೆ ಸುಖಕ್ಕಾಗಿ ಮಾಡಿಕೊಳ್ಳೋ ವ್ಯವಹಾರ ಅಲ್ಲ ಅನ್ನೋದಾದ್ರೆ ಮದುವೆ ಗಂಡು ರಾಮನಾಗಿ, ಹೆಣ್ಣು ಸೀತೆಯಾಗಿ ಇರಲಿ ಅಂತಾನೇ ಮದುವೆ ಆಗ್ತಾ ಇರೋವ್ರು, ಮಾಡ್ತಾ ಇರೋವ್ರು ಬಯಸ್ತಾರೆ



Comments