NAA KANDANTE SRI RAM ಭೂಮಿಗೆ ಅವತರಿಸಿದ ಶ್ರೀ ಹರಿಯ 7ನೇ ಅವತಾರವೇ ಈ ಶ್ರೀರಾಮ
- Sep 6, 2025
- 4 min read

ನಾ ಕಂಡಂತೆ: ಶ್ರೀ_ರಾಮ As I see it: Sri Rama NAA KANDANTE SRI RAM
ರಾಮ 🏹 ರಘುಕುಲ ತಿಲಕ 🚩
ಮಗಳು ಶಾಂತ ಹುಟ್ಟಿ ಅದೆಷ್ಟೋ ವರ್ಷಗಳು ಕಳೆದು ಕೊನೆಗೆ ಅವಳಿಗೆ ಮದುವೆ ಕೂಡ ಆಯ್ತು, ಆದ್ರೆ ದಶರಥ ನೇಮಿಗೆ ಮತ್ತೆ ಮಕ್ಕಳಾಗಲಿಲ್ಲ.
ಕೊನೆಗೆ ಅದೇ ಶಾಂತಾಳ ಗಂಡ ವೃಷ್ಯಶೃಂಗಿ ನಡೆಸಿ ಕೊಟ್ಟ ಪುತ್ರಕಾಮೇಷ್ಟಿ ಯಾಗದ ಫಲವಾಗಿ ಹುಟ್ಟಿದ 4 ಮಕ್ಕಳಲ್ಲಿ ಕೌಸಲ್ಯೆಯ ಗರ್ಭಗುಡಿಯಿಂದ ಭೂಮಿಗೆ ಅವತರಿಸಿದ ಶ್ರೀ ಹರಿಯ 7ನೇ ಅವತಾರವೇ ಈ ಶ್ರೀರಾಮ 🙏🏼
ದೇವರ ಅವತಾರವೇ ಆಗಿದ್ರೂ ಅವನೆಲ್ಲು ತನ್ನ super natural powersನ use ಮಾಡಲಿಲ್ಲ ಅವನು, ಹಾಗೆ ಮಾಡಿದ್ರೆ ವಾಮನನಾಗಿ ಒಂದೇ ಪಾದದಲ್ಲಿ ಇಡೀ ಭೂ ಲೋಕವನ್ನು ಆವರಿಸಿದವನಿಗೆ ಲಂಕೆಯನ್ನು ದಾಟೋಕೆ, ರಾವಣನನ್ನು ಕೊಲ್ಲೋಕೆ ಅಷ್ಟೆಲ್ಲ ಕಷ್ಟ ಪಡಲೆ ಬೇಕಾಗಿರಲಿಲ್ಲ...,
ಅಷ್ಟೇ ಯಾಕೆ, ಕೈಕೇಯಿ ತನ್ನನ್ನ ಕಾಡಿಗೆ ಕಳಿಸ್ತಾರೆ ಅಂತ ಮೊದಲೇ ತಿಳ್ಕೊಂಡು ಅವರನ್ನ hypnotize ಮಾಡಿ ಅವರ ಪರವಾಗಿ ಮಾತಾಡೋ ಹಾಗೆ ಮಾಡಿಕೊಂಡು ಕಥೆನೇ ಬೇರೆ ಮಾಡ್ಕೋಬಹುದಿತ್ತು....,
ಆದ್ರೆ ಮನುಷ್ಯನಾಗಿ ಹುಟ್ಟಿದ ಮೇಲೆ ಮನುಷ್ಯನ ಹಾಗೆ ಎಲ್ಲಾ ಕಷ್ಟಗಳನ್ನ ಮನುಷ್ಯರ ಹಾಗೆ ಅನುಭವಿಸುತ್ಲೆ ಆದರ್ಶ ಆದವನು ರಾಮ.
________________🚩 🏹 🚩 ________________
3 ತಾಯಂದಿರು ಮುದ್ದಿನ ಮಗನಾಗಿ, 3 ತಮ್ಮಂದಿರ ಜೊತೆ ಆಡ್ತಾ ಬೆಳಿತಿದ್ದ ಅಯೋಧ್ಯೆಯ ರಾಜಕುಮಾರ ರಾಮ ಆಶ್ರಮ-ಅಡವಿಗಳಲ್ಲಿ ಇದ್ದು ವಸಿಷ್ಠ-ವಿಶ್ವಾಮಿತ್ರರಿಂದ ಶಸ್ತ್ರ-ಶಾಸ್ತ್ರ ಅಭ್ಯಾಸ ಮಾಡಿದ.
ಗುರು ವಿಶ್ವಾಮಿತ್ರರ ಜೊತೆ ಸಂಚರಿಸುತ್ತಾ ಜನಕನ ಮಿತಿಲೆಗೆ ಬಂದ ರಾಮ, ಅಲ್ಲಿದ್ದ ಶೂರ ವೀರ ಪರಕ್ರಮಿಗಳಿಂದ ಎತ್ತೋಕೆ, ಅಲುಗಾಡಿಸೋಕು ಆಗದ, ನೂರಾರು ಸೈನಿಕರು ಆನೆಗಳು ಸೇರಿ ಎಳೆದು ತಂದಿಟ್ಟ ಶಿವಧನಸ್ಸನ್ನ ಭಕ್ತಿಯಿಂದ ಎತ್ತಿ ಅದರ ಶಿಂಜಿನಿಯನ್ನ ಎಳೆದು ಕಟ್ಟಿದ್ರೆ ಶಿವಧನಸ್ಸೆ ಮುರಿದಿತ್ತಂತೆ..., ಮಾತಿನಂತೆ ಜನಕ ಜಾನಕಿಯನ್ನ ಶಿವಧನಸ್ಸನ್ನು ಎತ್ತಿದ ರಾಮನಿಗೆ ಕನ್ಯಾದಾನ ಮಾಡಿ ಸೀತಾ ರಾಮರ ಕಲ್ಯಾಣ ನಡೆಸಿಕೊಟ್ಟರು.
ವಿಶೇಷ ಏನಂದ್ರೆ, ಜನಕನಿಗೆ ಭೂಮಿಯಲ್ಲಿ ಸಿಕ್ಕ ಭೂಮಿ ಪುತ್ರಿ ಸೀತೆನ ರಾಮನಿಗೆ ಕೊಟ್ಟು ಮದುವೆ ಮಾಡಿದ್ರೆ, ಜನಕನ ಇನ್ನೊಬ್ಬ ಅಂದ್ರೆ ಸ್ವಂತ ಮಗಳು ಊರ್ಮಿಳೆಯನ್ನ ರಾಮನ ತಮ್ಮ ಲಕ್ಷ್ಮಣನಿಗೆ n ಜನಕನ ತಮ್ಮ ಕುಷಾಧ್ವಜನ ಇಬ್ಬರು ಹೆಣ್ಣು ಮಕ್ಕಳನ್ನ ಅಂದ್ರೆ ಮಾಂಡವಿಯನ್ನ ರಾಮನ ತಮ್ಮ ಭರತನಿಗೆ n ಶೃತಕೀರ್ತಿಯನ್ನ ರಾಮನ ತಮ್ಮ ಶತ್ರುಘ್ನನಿಗೆ ಕೊಟ್ಟು ಮದುವೆ ಮಾಡಿಸಿದ್ರಂತೆ... ಅಂದ್ರೆ ಒಂದೇ ಕುಟುಂಬದ 4 ಹೆಣ್ಣು ಮಕ್ಕಳು ಒಂದೇ ಕುಟುಂಬದ ಸೊಸೆಯಂದಿರಾದ್ರು.
ಅಲ್ಲಿಗೆ ರಾಮನ ವಿಧ್ಯಾಭ್ಯಾಸನೂ ಮುಗೀತು, ಮದುವೇನು ಆಯ್ತು n ತನಗೂ ವಯ್ಯಸ್ಸಾಯ್ತು ಇನ್ನೂ ರಾಜ್ಯಭಾರ ರಾಮನಿಗೆ ಒಪ್ಪಿಸಿ ಇನ್ನಾದರೂ ತಾನು ಆರಾಮಾಗಿ ಇರ್ಬೇಕು ಅಂತ ದಶರಥ ರಾಮನ ಪಟ್ಟಾಭಿಷೇಕಕ್ಕೆ ತಯಾರಿ ಮಾಡ್ತಿದ್ರೆ,
ಮಂಥರೆಯ ಹಾಲಿನಂತಹ ಸಂಸಾರಕ್ಕೆ ಹುಳಿ ಹಿಂಡೋ ಬುದ್ದಿ ಇಂದ ತಾಯಿಯಿಂದ ಮಲತಾಯಿ ಆಗಿ ಬದಲಾದ ಕೈಕೇಯಿ ಹಿಂದೆಂದೋ ಖುಷಿಯಲ್ಲಿದ್ದಾಗ ದಶರಥ ಅವಳಿಗೆ ಕೊಟ್ಟ ಮಾತಿಗೆ ಕಟ್ಟು ಬಿದ್ದು ಅವಳ condition ಪ್ರಕಾರ ಆ ಕಡೆ ರಾಮನಿಗೆ ವನವಾಸಕ್ಕೆ ಹೋಗು ಅನ್ನೋಕೆ ಆಗದೆ, ಈ ಕಡೆ ರಾಮನ ಬದಲು ಭರತನಿಗೆ ಪಟ್ಟಾಭಿಷೇಕ ಮಾಡೋಕೆ ಆಗದೆ ಒದ್ದಾಡೋದು ತಿಳಿತಿದ್ದ ಹಾಗೆ ರಾಮ ತಂದೆ ಕೊಟ್ಟ ಮಾತು ಮುರಿಬಾರದು ಅಂತ ಭರತನಿಗೆ ಪಟ್ಟಾಭಿಷೇಕ ಮಾಡಿ ಅಂತ ತಾನು ವನವಾಸಕ್ಕೆ ಹೊರಟ.
ರಾಜನಾಗಬೇಕಾದವನು ಕಾಡಿಗೆ ಹೋಗೋದಾ,
ಅದೂ ವಾರವಲ್ಲ, ತಿಂಗಳಲ್ಲ... 14 ವರ್ಷ.
ನಾವಾಗಿದ್ರೆ ಹೋಗ್ತಿದ್ವೋ ಇಲ್ವೋ, but ಅವನು ರಾಮ 💙
ಅರಮನೆ, ರಾಜವೈಭೋಗಗಳಿಂತ ಅವನಿಗೆ ತಂದೆ ಕೈಕೇಯಿ ಚಿಕ್ಕಮ್ಮನಿಗೆ ಕೊಟ್ಟ ಮಾತು ನಡೆಸಿಕೊಡೋದು ದೊಡ್ಡದಾಗಿತ್ತು, ಅಲ್ಲೇ ಅವನೊಬ್ಬ ಆದರ್ಶ ಮಗನಾಗ್ತಾನೆ.
ಸರಿ ಅವನೇನೋ ಹೊರಟ, ಆದ್ರೇ #ಸೀತೆ...?
ಅವಳಿಗೆ ಯಾರೂ ವನವಾಸಕ್ಕೆ ಹೋಗು ಅಂದಿರಲಿಲ್ಲ, ಆಗ ತಾನೇ ಮದುವೆಯಾಗಿ ಮನೆ ತುಂಬಿದ ಅಯೋಧ್ಯೆಯ ರಾಣಿಯಾಗಬೇಕಾಗಿದ್ದವ್ಳು ಅವ್ಳು, ರಾಮ ಬರೋವರೆಗು ಅವಳು ಆರಾಮವಾಗಿ ಅರಮನೆಯಲ್ಲಿ ಇರಬಹುದಿತ್ತು.
ಗಂಡ ನಾಡಲ್ಲಿದ್ರು ಸರಿ, ಕಾಡಲ್ಲಿದ್ರು ಸರಿ... ಅವ್ನೆಲ್ಲಿ ಇರ್ತಾನೋ ಅದೇ ನನಗೆ ಅರಮನೆ ಅಂತ ವನವಾಸಿನಿ ಆಗೋಕೆ ಅವನ ಹಿಂದೆ ಹೆಜ್ಜೆ ಹಾಕಿದಳು ಸೀತೆ, ಹೆಂಡತಿ ಅಂದ್ರೆ ಸಪ್ತಪದಿಯಲ್ಲಿ ಮಾತ್ರ ಅಲ್ಲ... ಇಡೀ ಜೀವನ, ಜೀವನದ ಪ್ರತೀ ಹೆಜ್ಜೆಗೂ ಗಂಡನ ಜೊತೆಯಾಗಬೇಕು ಅಂತ ಜಗತ್ತಿಗೆ ತಿಳಿಸಿದವ್ಳು ಸೀತೆ.
ಸೀತೆ ಏನೋ ಧರ್ಮ ಪತ್ನಿ, ಅರ್ಧಾಂಗಿ, ಸಹಧರ್ಮಿಣಿ..., ಅರಮನೆ ವಾಸವೋ, ಅಡವಿ ವಾಸವೋ, ಗಂಡನ ಸಹವಾಸ ಮಾಡೋದೇ ಧರ್ಮ ಅಂತ ಹೊರಟ್ಳು.
ಆದ್ರೇ #ಲಕ್ಷ್ಮಣ...?
ಅವನು ದಶರಥನ ಮಗನೇ, ಆದ್ರೆ ರಾಮನ ತಾಯಿ ಕೌಸಲ್ಯೆಗೆ ಮಗ ಅಲ್ಲ... ಅವ್ನು ಸುಮಿತ್ರೆಯ ಮಗ, ಅವ್ನು ಸೌಮಿತ್ರಿ... ಅವನು ಆರಾಮವಾಗಿ ಅರಮನೆಯಲ್ಲಿ ಇರಬಹುದಿತ್ತು, ಇರಬೇಕಿತ್ತು, ಆದ್ರೆ ದಶರಥ ನೇಮಿಯ 4 ಮಕ್ಕಳಲ್ಲೂ ಅದೆಂತಾ ಭಾತೃ ಪ್ರೇಮ...❤️
ಅರಮನೆ, ಅಪ್ಪ, ಅಮ್ಮ, ಆಗಷ್ಟೇ ಮದುವೆಯಾದ ಹೆಂಡತಿಯನ್ನು ಬಿಟ್ಟು 14 ವರ್ಷನು ಅಣ್ಣನಿಗೆ ಕಾವಲಾಗಿ, ಸಹಾಯಕನಾಗಿ, ಸೇವಕನಾಗಿ ಇರ್ತೀನಿ ಅಂತ ಹೊರಟೇ ಬಿಟ್ಟ.
ಇಷ್ಟೇಲ್ಲಾ ಪಾಪ ಭರತ, ಶತ್ರುಘ್ನರಿಗೆ ಗೊತ್ತಿಲ್ಲದೇ ನಡೆದಿದ್ದು, ಆಗವರು ತಮ್ಮ ತಾತನ ಮನೆಯಲ್ಲಿದ್ರು..., ಈಗಿನ ಹಾಗೆ fb, whatsapp ಇರ್ಲಿಲ್ಲ ನೋಡಿ, so ಅವ್ರಿಗೆ ಇದ್ಯಾವುದೂ ಗೊತ್ತೇ ಇರ್ಲಿಲ್ಲ.
ಶ್ರವಣ ಕುಮಾರನ ತಂದೆ ತಾಯಿ ಶಾಪದಂತೆ 4 ಮಕ್ಕಳೂ ದೂರವಿದ್ದ ಕಾಲದಲ್ಲೇ ದಶರಥ ಮಹಾರಾಜ ಕೊನೆಯುಸಿರೆಳೆದ.
ಅಲ್ಲಿಗೆ ಬಂದ ಭರತ ಶತ್ರುಘ್ನರಿಗೆ ವಿಷಯ ಗೊತ್ತಾದಾಗ ಅಷ್ಟು ದೊಡ್ಡ ಸಾಮ್ರಾಜ್ಯ ಸಿಕ್ಕಿದ್ದಕ್ಕೆ ಅವನು ಚೂರೂ ಖುಷಿ ಪಡದೇ, ತಾಯಿಗೆ ಬೈದು ಅಣ್ಣನನ್ನೆ ಕರ್ಕೊಂಡು ಬರ್ತೀನಿ ಅಂತ ಕಾಡಿನ ಕಡೆ ಹೊರಟ.
ಅಲ್ಲಿ ರಾಮನನ್ನು ಭೇಟಿ ಆಗಿ ತಂದೆ ಸತ್ತ ವಿಷಯ ತಿಳಿಸಿ ನನ್ನ ತಾಯಿ ಮಾಡಿದ ತಪ್ಪನ್ನ ಕ್ಷಮಿಸು, ಈಗ ನೀನೇ ಅಯೋಧ್ಯೆಯ ರಾಜನಾಗು ಬಾ ಅಂದ್ರೆ ರಾಮ ನಾನು ಬರೋಕೆ ಆಗಲ್ಲ, ನಾನ್ ಬಂದ್ರೆ ತಂದೆ ಚಿಕ್ಕಮ್ಮನಿಗೆ ಕೊಟ್ಟ ಮಾತು ಮುರಿದ ಹಾಗಾಗುತ್ತೆ ಅಂದ.
ಸರಿ ಅಂದ #ಭರತ, 14 ವರ್ಷ ನಾನು ನಿನ್ನ ಪರವಾಗಿ ರಾಜ್ಯದ ಜವಾಬ್ದಾರಿ ನೋಡ್ಕೋತೀನಿ... ಆದ್ರೆ 14 ವರ್ಷ ಮುಗಿದ ದಿನ ನೀನು ಬಾರದೆ ಇದ್ರೆ ಅವತ್ತೇ ಅಗ್ನಿಪ್ರವೇಶ ಮಾಡ್ತೀನಿ ಅಂತ ಅಲ್ಲಿಂದ ಹೊರಡ್ತಾನೆ, but ಹೋಗೋವಾಗ ರಾಮನ ಪಾದುಕೆಗಳನ್ನು ತಲೆ ಮೇಲೆ ಹೊತ್ಕೊಂಡು ಹೋಗಿ ಸಿಂಹಾಸನದ ಮೇಲಿಟ್ಟು 14 ವರ್ಷ ರಾಜನ ಎಲ್ಲಾ ಕರ್ತವ್ಯ, ಜವಾಬ್ದಾರಿಗಳನ್ನ ಒಬ್ಬ ನೌಕರನ ಹಾಗೆ ನೋಡ್ಕೋತಾನೆ, ಅದೂ ಅರಮನೆಯ ವೈಭೋಗಗಳ ಮಧ್ಯ ಇದ್ದಲ್ಲ... ಅಣ್ಣನ ಹಾಗೇ ತಾನೂ ಆಶ್ರಮವಾಸಿಯಾಗಿ.
ಅದೇ ನಮ್ಮಂತವರಿಗೆ ಇಂತ chance ಸಿಕ್ಕಿದ್ರೆ ಈಗಷ್ಟೇ ಅಲ್ಲ ಮುಂದಿನ ತಲೆಮಾರಿಗೂ ಸೇರಿಸಿ ಈ ರಾಜ್ಯ ನಮ್ಮದೇ ಅಂತ document ಮಾಡಿಸ್ಕೊತಿದ್ವಿ ಅನ್ಸತ್ತೆ...
3 ಜನ ಅಣ್ಣಂದಿರು ಆಚೆ ಇದ್ದಾಗ 3 ಜನ ತಾಯಂದಿರನ್ನು, ರಾಜ ಪರಿವಾರವನ್ನ ನೋಡಿಕೊಂಡವನು #ಶತ್ರುಘ್ನ
ನಿಜಕ್ಕೂ ತಮ್ಮಂದಿರ ವಿಷಯದಲ್ಲಿ ರಾಮ ಅದೃಷ್ಟವಂತ ❤️
________________🚩 🏹 🚩 ________________
ಹಿಂದೆ ವಿಶ್ವಾಮಿತ್ರರ ಜೊತೆ ಇದ್ದಾಗ ಆಶ್ರಮವಾಸಿಗಳಿಗೆ ತೊಂದ್ರೆ ಕೊಡ್ತಿದ್ದ ತಾಟಕಿಯನ್ನ ರಾಮ ಕೊಂದಿದ್ದ, ಆ ಸೇಡು ತೀರಿಸಿಕೊಳ್ಳೋಕೆ ಅವಳ ಮಗ ಮಾರೀಚ ರಾವಣನ ಜೊತೆ ಸೇರಿ ಮಾಯಾಜಿಂಕೆಯಾಗಿ ರಾಮ ಸೀತೆಯರ ಹತ್ರ ಓಡಾಡ್ತಾನೆ, ಆ ಮಾಯಾಮೃಗ ಸೀತೆನ ಸೆಳೀತು.
ರಾಮ ಇದು ಕಾಡು, ಇಲ್ಲಿ ರಾಕ್ಷಸರ ಮಾಯೆ ಇರುತ್ತೆ ಅಂದ್ರು ಬಿಡದೇ ಅದು ಬೇಕು ಅಂದಾಗ ತನಗಾಗಿ ಅರಮನೆ, ರಾಜವೈಭೋಗ ಬಿಟ್ಟು ಬಂದವ್ಳ ಇಷ್ಟು ಚಿಕ್ಕ ಆಸೇನು ಈಡೇರಿಸದೇ ಇದ್ರೆ ಹೇಗೆ ಅಂದ್ಕೊಂಡು ರಾಮ ಮಾಯಾಮೃಗದ ಬೆನ್ನುತ್ತಿ ಲಕ್ಷ್ಮಣನಿಗೆ ಅತ್ತಿಗೆ ಜೋಪಾನ ಅಂತ ಹೇಳಿ ಹೊರಟ.
ಅಲ್ಲಿ ರಾಮನಿಂದ ಏಟು ತಿಂದ ಮಾರೀಚ ಸಾಯೋವಾಗ ಬೇಕಂತಾನೇ ಸೀತಾ, ಲಕ್ಷ್ಮಣ ಅಂತ ನರಳ್ತಾ ಕೂಗಿದ. ಅದು ಕೇಳ್ತಿದ್ದ ಹಾಗೇ ಸೀತೆ ಲಕ್ಷ್ಮಣನಿಗೆ ನಿಮ್ಮ ಅಣ್ಣ ರಾಮನಿಗೆ ಏನೋ ಅಪಾಯ ಆಯ್ತು ಸಹಾಯಕ್ಕೆ ಹೋಗು ಅಂತಾಳೆ. ಲಕ್ಷ್ಮಣ ಇಲ್ಲ, ಅದು ಅಣ್ಣ ಅಲ್ಲ... ಅದು ರಾಕ್ಷಸನ ಮಾಯೆ ಅಂದಾಗ ಎಷ್ಟೇ ಹೇಳಿದರೂ ಕೇಳದೇ ನಿಂಗೆ ನನ್ ಮೇಲೆ ಆಸೆ ಅದಕ್ಕೆ ಅಣ್ಣ ಅಪಾಯದಲ್ಲಿದ್ರೂ ಸಹಾಯಕ್ಕೆ ಹೋಗ್ತಿಲ್ಲ ಅನ್ನೋ ಮಾತು ಕೇಳಿ ತಡೆಯೋಕೆ ಆಗದೇ ಅವರಿದ್ದ ಕುಟೀರದ ಸುತ್ತ ಲಕ್ಷ್ಮಣ ರೇಖೆಯನ್ನು ಎಳೆದು ನಾನು, ಅಥವಾ ಅಣ್ಣ ಬರೋವರೆಗು ಇದನ್ನ ದಾಟಿ ಇದರಿಂದ ಆಚೆ ಬರಬೇಡಿ ಅಂತ ಹೇಳಿ ಕೂಗು ಕೇಳಿದ ಕಡೆ ಹೊರಟ... ಸೀತಾ ಅಪಹರಣ ಆಗಿ ರಾಮ ಲಕ್ಷ್ಮಣರು ಅವಳನ್ನ ಹುಡುಕಿ ಹೋಗುವಾಗ ಅವಳು ಅವರಿಗೆ ಸುಳಿವು ಸಿಗಲಿ ಅಂತ ದಾರಿ ಉದ್ದಕ್ಕೂ ಎಸೆದ ಅವಳ ಆಭರಣಗಳನ್ನು ನೋಡ್ತಾ ಹೋದಾಗ ಲಕ್ಷ್ಮಣನಿಗೆ ಸೀತೆಯ ಎಲ್ಲಾ ಆಭರಣಗಳಲ್ಲಿ ಗುರುತು ಹಿಡಿಯೋಕೆ ಆಗಿದ್ದು ಅವಳ ಕಾಲುಂಗುರವನ್ನು ಮಾತ್ರ, ಯಾಕಂದ್ರೆ ಪಾಪ ಅವನು ಯಾವತ್ತೂ ಅವಳನ್ನ ಕತ್ತೆತ್ತಿ ಮುಖ ನೋಡಿ ಮಾತಾಡಿಯೆ ಇರ್ಲಿಲ್ಲ ಅಂತೆ, ಬರೀ ಕಾಲು ನೋಡ್ಕೊಂಡು ಮಾತಾಡ್ತಿದ್ರಂತೆ, ಅಂತ ಲಕ್ಷ್ಮಣ ಅತ್ತಿಗೆಯ ಇಂತ ಮಾತು ಕೇಳಿನೂ ಹಾಗೆ ಇರೋಕೆ ಆಗದೆ ಅಣ್ಣನಿಗೆ ಏನೂ ಆಗಿರಲ್ಲ ಅಂತ ಗೊತ್ತಿದ್ದೂ ಅಣ್ಣನನ್ನ ಹುಡುಕಿ ಹೊರಟ.
ಅವ್ನು ಆ ಕಡೆ ಹೋಗ್ತಿದ್ದ ಹಾಗೆ ಈ ಕಡೆ ಅವನು ಹೋಗೋದನ್ನೆ ಕಾದಿದ್ದ ರಾವಣ ಸೀತೆಯನ್ನ ಅಪಹರಿಸೋಕೆ ಅವರ ಕುಟೀರದ ಕಡೆ ಬಂದ, ಆದ್ರೆ ಅವನಿಗೆ ಲಕ್ಷ್ಮಣ ರೇಖೆ ದಾಟೋಕೆ ಆಗ್ಲಿಲ್ಲ, so ಸನ್ಯಾಸಿ ವೇಷ ಹಾಕಿ ಸೀತೆಯನ್ನ ಕರಿತಾನೆ, ಕೊನೆಗೆ ಸೀತೆ ಲಕ್ಷ್ಮಣ ರೇಖೆ ದಾಟಿ ಆಚೆ ಹೋಗ್ತಿದ್ದ ಹಾಗೆ ತನ್ನ ನಿಜ ರೂಪ ತೋರಿಸುತ್ತಾ ಅವಳನ್ನ ತನ್ನ ಪುಷ್ಪಕ ವಿಮಾನದಲ್ಲಿ ಹಾಕ್ಕೊಂಡು ಲಂಕೆ ಕಡೆ ಹೋಗ್ತಾನೆ.
ದಾರಿ ಉದ್ದಕ್ಕೂ ಸೀತೆ ರಾಮ ಲಕ್ಷ್ಮಣರಿಗೆ ಸುಳಿವು ಸಿಗಲಿ ಅಂತಾನೇ ತನ್ನ ಒಂದೊಂದೇ ಆಭರಣಗಳನ್ನ ಎಸೀತಾ ಹೋಗ್ತಾಳೆ, ಈ ಮಧ್ಯ ಜಟಾಯು ರಾವಣನನ್ನು ತಡೆಯೋಕೆ ಹೋಗಿ ರಾವಣನಿಂದ ತನ್ನ ರೆಕ್ಕೆ ಕಳ್ಕೊಂಡು ರಾಮನಿಗೆ ವಿಷಯ ತಿಳಿಸೋಕೆ ಅಂತಾನೇ ಜೀವ ಹಿಡ್ಕೊಂಡು ಕಾಯ್ತಾ ಇರುತ್ತೆ.
ರಾಮ ಲಕ್ಷ್ಮಣ ಅಲ್ಲಿಗೆ ಬಂದಾಗ ಅವರಿಗೆ ಸೀತೆಯನ್ನು ಅಪಹರಿಸಿದ್ದು ಲಂಕೆಯ ರಾಜ ಲಂಕೇಶ್ವರ ಅಂತ ಹೇಳಿ ಪ್ರಾಣ ಬಿಡುತ್ತೆ... ಮುಂದೆ ಈ ವಿಷಯ ತಿಳಿದ ಜಟಾಯುವಿನ ಅಣ್ಣ ಸಂಪಾತಿ ತಮ್ಮನ ಹಾಗೆ ತಾನೂ ರಾಮನಿಗೆ ಸಹಾಯ ಮಾಡ್ತೀನಿ ಅಂತ ರಾಮನ team ಸೇರ್ತಾನೆ.
ಮುಂದೆ ಸುಗ್ರೀವನ ಸ್ನೇಹ, ವಾಲಿಯನ್ನ ಹೊಡೆದದ್ದು, ಸುಗ್ರೀವನಿಗೆ ನ್ಯಾಯ n ರಾಜ್ಯ ಕೊಡಿಸಿದ್ದು, ಆಂಜನೇಯ, ಜಾಂಬವಂತರ ಭೇಟಿ ಎಲ್ಲಾ ನಡೆಯುತ್ತೆ, ಆಂಜನೇಯ ಜೈ ಶ್ರೀರಾಮ್ ಅಂತ ಹಾರಿ ಸಾಗರವನ್ನೆ ದಾಟಿ ಲಂಕೆಗೆ ಹೋಗಿ ಸೀತೆಗೆ ರಾಮನ ಸಂದೇಶ ಕೊಟ್ಟು, ರಾವಣನಿಗೆ ಸೀತೆಯನ್ನು ಬಿಡೋಕೆ ಹೇಳಿ ಅವನು ಒಪ್ಪದೇ misbehave ಮಾಡಿದಾಗ ಆಂಜನೇಯ ರಾವಣನ ಚಿನ್ನದ ಲಂಕೆಯನ್ನೇ ಸುಟ್ಟು ವಾಪಸ್ ಹೋಗಿ, ವಾನರ ಸೇನೆಯ ಸಹಾಯದಿಂದ ರಾಮಸೇತುವನ್ನ ಕಟ್ಟಿ ಲಂಕೆಗೆ ಹೋಗಿ ಯುದ್ಧ ಮಾಡಿ ರಾವಣ ಕುಂಭಕರ್ಣರಾಗಿ ಜನಿಸಿದ್ದ ವಿಷ್ಣುವಿನ ದ್ವಾರಪಾಲಕರಾದ ಶಾಪಗ್ರಸ್ತ ಜಯ-ವಿಜಯರಿಗೆ ಮುಕ್ತಿ ಕೊಟ್ಟು, ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿ ಸೀತೆಯನ್ನ ಕರ್ಕೊಂಡು ಹೋಗೋವಾಗ ಅವಳು ರಾವಣನಂತ ರಾಕ್ಷಸನ ಹತ್ತಿರ ಇದ್ದು ಬಂದಿದ್ರು ಅಗ್ನಿಯಷ್ಟೇ ಪವಿತ್ರವಾಗಿ ಇದ್ದಾಳೆ ಅನ್ನೋದನ್ನ prove ಮಾಡೋಕೆ ಅವಳು ಅಗ್ನಿಪರೀಕ್ಷೆ ಎದುರಿಸ್ತಾಳೆ. ಕೊನೆಗೆ ಎಲ್ಲರೂ ಅಯೋಧ್ಯೆಗೆ ಬರ್ತಾರೆ... ಆ ಖುಷಿಗೆ


Comments