DHARMASTALA FILES 'ಧರ್ಮಸ್ಥಳ ಫೈಲ್ಸ್'
- DENIL
- Sep 1
- 3 min read
Updated: Sep 7

'ಧರ್ಮಸ್ಥಳ ಫೈಲ್ಸ್' DHARMASTALA FILES
(ಟೈಟಲ್ ರಿಜಿಸ್ಟರ್ ಆಗಿದೆಯಂತೆ, ಆದ್ದರಿಂದ ನಾನೊಂದು ಕಥೆ ಮಾಡಿದ್ದೇನೆ, ಇದನ್ನ ಟೈಟಲ್ ರಿಜಿಸ್ಟರ್ ಮಾಡಿದವರು ಓದಿ ಸಿನೇಮಾ ತೆಗೆಯಲಿಕ್ಕೆ ಸಹಕರಿಸಬೇಕೆಂದು ಕೇಳ್ಕೋತೀನಿ)
'ಧರ್ಮಸ್ಥಳ ಫೈಲ್ಸ್-ಭಾಗ 01'
ಸಿನೇಮಾ ಓಪನಿಂಗಲ್ಲಿ 'ಮಂಜುನಾಥ ಸ್ವಾಮಿ ಕೃಪೆ' ಎಂಬ ಟೈಟಲ್ಲಿನೊಂದಿಗೆ ಶಿವಸ್ತೋತ್ರದ ಬ್ಯಾಗ್ರೌಂಡ್ ಸಾಂಗ್, ನಂತರ ಸೀನ್ ಓಪನ್ ಆಗುತ್ತೆ ಆಕಾಶದಿಂದ ಕ್ಯಾಮರಾ ಆ್ಯಂಗಲ್ ಡೌನ್ ಆಗ್ತಾ ಆಗ್ತಾ ದೇವಸ್ಥಾನ, ಡಣ್ ಡಣ್ ಗಂಟೆ ಸದ್ದು, ಜನ ಎಲ್ಲ ಓಡಾಡ್ತಾ ಇದ್ದಾರೆ, ಇದು ಸಿನೇಮಾ ಶುರುವಾಗೋ ರೀತಿ ಇನ್ನ ಕಥೆಗೆ ಬರೋಣ.
ಮೊದಲ ಸೀನ್
ಒಂದೂರಲ್ಲಿ ಒಂದು ದೊಡ್ಡ ದೇವಸ್ಥಾನ ಇರುತ್ತೆ, ಅದನ್ನ ಅಲ್ಲಿನ ಹಿರಿಯ, ಪ್ರತಿಷ್ಠಿತ ಕುಟುಂಬದವರೊಬ್ಬರು ನಿರ್ವಹಿಸಿಕೊಂಡು ಬಂದಿರ್ತಾರೆ, ಜನರ ಕಷ್ಟ ಆಲಿಸೋದು, ಅವರಿಗೆ ಸಹಾಯ ಮಾಡೋದು ಆ ಹಿರಿಯ ಗೌಡರ ನಿತ್ಯದ ಕೆಲಸದಲ್ಲೊಂದು, ದೈವ ಭಕ್ತರೆಲ್ಲ ದೇವಸ್ಥಾನಕ್ಕೆ ಬರೋದು, ಅಲ್ಲಿನ ನದಿಯಲ್ಲಿ ಮುಳುಗೆದ್ದು ಪಾಪ ಕಳೆದುಕೊಂಡು ಹೋಗೋದು, ಹೀಗೆ ಯಾವುದೇ ಅಡೆತಡೆಯಿಲ್ಲದೆ ದೇವಾಲಯ ಹಾಗೂ ಆ ಊರಿನ ಕೀರ್ತಿ ರಾಜ್ಯದಾದ್ಯಂತ ಹರಡಿರುತ್ತೆ, ದಿನಾಲೂ ಭಕ್ತರ ಸಂಖೆ ಜಾಸ್ತಿಯಾಗುತ್ತಲೇ ಇರುತ್ತದೆ.
ಮುಂದಿನ ಸೀನ್
ಒಬ್ಬ ರೌಡಿ ಮುಂಬೈನಲ್ಲಿ ಮಾದಕ ವಸ್ತು ಮಾರಾಟ, ಸ್ಮಗ್ಲಿಂಗ್, ದರೋಡೆ ಗೂಂಡಾಗಿರಿ ಮಾಡಿಕೊಂಡಿರುತ್ತಾನೆ, ಆತನನ್ನ ಪೋಲೀಸರು ಹಲವು ಬಾರಿ ಬಂಧಿಸಿ, ಕೊನೆಗೆ ಆತನನ್ನ ಗಡಿಪಾರು ಮಾಡಿಬಿಡ್ತಾರೆ, ಆಗ ಆತ ಸೀದ ಈ ಕಥೆಯಲ್ಲಿ ಬರುವ ದೇವಸ್ಥಾನದ ಹತ್ತಿರದಲ್ಲೆ ವಾಸವಾಗಿಬಿಡ್ತಾನೆ, ವಾಸಿಸುತ್ತಾ ನಿಧಾನವಾಗಿ ತನ್ನದೊಂದು ಸಣ್ಣ ಪುಡಿರೌಡಿಗಳ ಗುಂಪನ್ನೂ ಕಟ್ಟಿಬಿಡುತ್ತಾನೆ, ಇಲ್ಲಿಯೂ ಸಹ ಸಾಕಷ್ಟು ಕ್ರಿಮಿನಲ್ ಚಟುವಟಿಕೆಗಳನ್ನ ನಡೆಸಿ, ರೌಡಿಶೀಟರ್ ತೆರೆಸಿಕೊಳ್ಳುತ್ತಾನೆ, ಆಗ ಆತ ತನ್ನ ರಕ್ಷಣೆಗೆ ಹಿಂದೂ ಸಂಘಟನೆ ಸೇರಿ ಒಳ್ಳೆಯವನು ಅನಿಸಿಕೊಳ್ಳಲಿಕ್ಕೆ ನಿಂತು ಬಿಡುತ್ತಾನೆ. ದೇವಾಲಯದ ಆದಾಯ ಕೀರ್ತಿ ಈತನಿಗೆ ಮನಸಿನಲ್ಲಿಯೇ ಕುಕ್ಕುವಂತೆ ಮಾಡಿರುತ್ತದೆ.
ಮೂರನೆ ಸೀನ್
ನಕ್ಸಲ್ ಚಟುವಟಿಗಳಲ್ಲಿ ತೊಡಗಿದ್ದವನೊಬ್ಬ ಶರಣಾಗಿ ಬದಲಾಗಿ ಪೋಲೀಸ್ ಕಾನ್ಸ್ಟೆಬಲ್ ಆಗಿದ್ದವನೊಬ್ಬ,ರಾಜಕಾರಣಿಯೊಬ್ಬರಿಗೆ ಹೊಡೆದು ಮತ್ತೆ ಸಸ್ಪೆಂಡ್ ಆಗಿ, ರಾಜ್ಯದ ಪ್ರತಿಷ್ಠಿತ ಕಟ್ಟಡವೊಂದಕ್ಕೆ ಬಾಂಬ್ ಇಡಲು ಹೋಗಿ ವಿಫಲನಾಗುತ್ತಾನೆ. ಅಲ್ಲಿಂದ ಕೇಸ್ ಕೋರ್ಟ್ ಅಂತ ಅಲೆದಾಡಿ ಹೇಗೋ ಹೊರಗೆ ಬರುತ್ತಾನೆ, ಈತನಿಗೆ ಆ ಸಮಯದಲ್ಲಿ ಕೆಲಸವಿಲ್ಲದ ಕಾರಣ ನಕ್ಸಲ್ ಸಿದ್ಧಾಂತಗಳನ್ನ ಮೈಗೂಡಿಸಿಕೊಂಡಿದ್ದವನು, ಹಣೆಗೆ ತಿಲಕ ಇಟ್ಟುಬಿಡುತ್ತಾನೆ, ದೈವ ಭಕ್ತನಾಗಿಬಿಡುತ್ತಾನೆ.
ನಾಲ್ಕನೇ ಸೀನ್, ಇದು ಸ್ವಲ್ಪ ಇಂಟರೆಸ್ಟಿಂಗ್ ಹಾಗೂ ಟರ್ನ್ ತಗೊಳುತ್ತೆ..
ಈತ ಒಬ್ಬ ಅನ್ಯಕೋಮಿನ ಯುವಕನಾಗಿದ್ದು, ಭಯೋತ್ಪಾದನೆ ಹಾಗೂ ಲವ್ ಜಿಹಾದ್ ವಿಚಾರಗಳಲ್ಲಿ ತರಬೇತಿ ಪಡೆದವನಾಗಿರುತ್ತಾನೆ, ಹಾಗೂ ವಿಡಿಯೋ ಎಡಿಟಿಂಗ್‌ನಲ್ಲಿ ಮಾಸ್ಟರ್ ಡಿಗ್ರಿ ಮಾಡಿ, ಹ್ಯಾಕಿಂಗ್‌ಗಳನ್ನೂ ಕೂಡ ಕಲಿತಿರುತ್ತಾನೆ. ಅಜ್ಜಮೀರು ದರ್ಗಾದಲ್ಲಿ ನೂರಾರು ಅತ್ಯಾಚಾರಗಳಾಗಿದ್ದರೂ, ಅದೇ ದರ್ಗಾದ ಅತ್ಯಾಚಾರಿಗಳ ಬಳಿ ಹಣ ಪಡೆದು ಅಲ್ಲಿಂದಲೇ ಭಯೋತ್ಪಾದನೆಗೆ ಬೇಕಾದ ಶಸ್ತ್ರಾಸ್ತ್ರಗಳನ್ನ ಸಂಬಂಧಪಟ್ಟವರಿಗೆ ಪೂರೈಸುವ ಕೆಲಸ ಮಾಡುತ್ತಿರುತ್ತಾನೆ..
ಐದನೆ ಸೀನ್
ಕೇರಳಕ್ಕೆ ಹೋಗುವ ಈ ಸೀನ್ ಬಹಳ ಮುಖ್ಯವಾದುದು,
ಕೇರಳದ ನಕ್ಸಲ್ ಹಾಗೂ ಕಮ್ಯೂನಿಸಂ ಸಿದ್ಧಾಂತಿಗಳ ಪರಿಚಯವಿದ್ದ ನಕ್ಸಲ್ ಸಿದ್ಧಾಂತಿ ಕಾನ್ಸ್ಟೇಬಲ್ ಅವರಿಂದಲೇ ಆರ್ಥಿಕ ನೆರವು ಹಾಗು ನಕ್ಸಲಿಸಂ ಹೆಚ್ಚಿಸಲು ಬೇಕಾದ ತಯಾರಿ ಮಾಡಿಕೊಂಡಿರುತ್ತಾನೆ, ಆ ಸಮಯದಲ್ಲಿ ಈತನಿಗೆ ರೌಡಿಯ ಪರಿಚಯವಾಗಿಬಿಡುತ್ತೆ. ಆಗ ಇಬ್ಬರು ತೀರ ಕ್ಲೋಸ್ ಆಗಿ ತಮ್ಮ ಎಲ್ಲ ಪರ್ಸನಲ್ ವಿಚಾರಗಳನ್ನೂ ಶೇರ್ ಮಾಡಿಕೊಳ್ಳತೊಡಗುತ್ತಾರೆ.
ಗಡಿಪಾರಾಗಿ ಬಂದಿದ್ದ ರೌಡಿಗೆ ದೇವಸ್ಥಾನದ ವೈಭವ ಕಣ್ಣು ಕುಕ್ಕಿದ್ದು ಒಂದೆಡೆಯಾದರೆ, ದೇವಾಲಯದ ಸುತ್ತಮುತ್ತಲಿನ ಆಸ್ತಿಗಳನ್ನ ಅಕ್ರಮವಾಗಿ ಹೊಡೆಯಲೆತ್ನಿಸಿದಾಗ ದೇವಾಲಯ ನೋಡಿಕೊಳ್ಳುತ್ತಿದ್ದ ಗೌಡರು ಅಡ್ಡಗಾಲು ಹಾಕಿದರೆಂಬ ಕೋಪವೊಂದುಕಡೆ ಇರುತ್ತದೆ. ಇನ್ನ ಆ ಎಕ್ಸ್ ಕಾನ್ಸ್ಟೇಬಲ್ ಸಹ ಹಣವಿಲ್ಲದೆ ಜೀವನಕ್ಕೆ ಕಷ್ಟವಾಗಿರುತ್ತದೆ, ಆಗ ಇಬ್ಬರೂ ಸೇರಿ ದೇವಸ್ಥಾನವನ್ನೆ ಕೆಡವುವ ಪ್ಲಾನ್ ಹಾಕಿಬಿಡುತ್ತಾರೆ..!
ಮೊದಲೊಮ್ಮೆ ಬಾಂಬ್ ಇಡಲಿಕ್ಕೆ ಹೋದ ಅನುಭವವಿದ್ದರೂ ಅಷ್ಟು ದೊಡ್ಡ ದೇವಾಲಯಕ್ಕೆ ಒಬ್ಬನೆ ಬಾಂಬ್ ಇಡುವುದು ಕಷ್ಟ ಎಂದು ಎಕ್ಸ್ ಕಾನ್ಸ್ಟೇಬಲ್ ಯೋಚಿಸುತ್ತಾನೆ. ಆಗ ಇವರಿಗೆ ಭಯೋತ್ಪಾದನೆಗೆ ಶಸ್ತ್ರಾಸ್ತ್ರ ಪೂರೈಸುತ್ತಿದ್ದ ಆ ಅನ್ಯ ಕೋಮಿನ ಯುವಕನ ಪರಿಚಯವಾಗಿಬಿಡುತ್ತೆ. ಮೂವರೂ ಸೇರಿ ಬಾಂಬ್ ಇಡುವ ದಿನವನ್ನು ನಿಗದಿ ಮಾಡಿ ಬಿಡುತ್ತಾರೆ. ಅದಕ್ಕೆ ಪೂರಕವೆಂಬಂತೆ ಆ ಅನ್ಯಕೋಮಿನ ಯುವಕ ಬಾಂಬ್ ಎಲ್ಲಿ ಹೇಗೆ ಇಡಬಹುದು ಎಂಬುದನ್ನು ತಿಳಿಯಲಿಕ್ಕೆ ದೇವಸ್ತಾನದ ಒಳಗೆಲ್ಲ ಹೋಗಿದನ್ನ ರೌಡಿಗೆ ಫೋಟೋ ಕಳಿಸುತ್ತಾನೆ, ಅದರಲ್ಲಿ ಈಗ ಥೇಟ್ ಹಿಂದೂವಿನಂತೆ ಪಂಚೆ ಧರಿಸಿರುತ್ತಾನೆ, ಇದರಿಂದ ಬಾಂಬ್ ಇಡುವ ದಿನ ಜನರಿಗೆ ಅನುಮಾನ ಬರುವುದಿಲ್ಲ ಎಂದು ಖಚಿತ ಪಡಿಸಿಕೊಳ್ಳುತ್ತಾರೆ.
'ಬಾಂಬ್ ಇಡುವ ದಿನ'
ಮೂವರು ಸೇರಿ ಬಾಂಬುಗಳನ್ನು ಹಣ್ಣುಕಾಯಿ ಚೀಲದಲ್ಲಿ ಹಾಕಿಕೊಂಡು ಇನ್ನೇನು ಹೊರಡಬೇಕು ಅಷ್ಟರಲ್ಲಿ NIA ಭಟ್ಕಳದಲ್ಲಿ ಇವರಿಗಿಂದ ಮೊದಲೆ ಬಾಂಬ್ ಇಡಲು ತೀರ್ಮಾನಿಸಿದ್ದ ಒಂದಿಷ್ಟು ಭಯೋತ್ಪಾಕರನ್ನ ವಶಪಡಿಸಿಕೊಂಡಿರುತ್ತದೆ, ಹಾಗೂ ದೇವಾಲಯದ ಸುತ್ತಲೂ ಭದ್ರತೆ ಹೆಚ್ಚಿಸಿಬಿಡುತ್ತದೆ.
ಇದರಿಂದ ತಮ್ಮ ಮೊದಲ ಪ್ರಯತ್ನ ವಿಫಲವಾಯ್ತು ಎಂದುಕೊಂಡಾಗಲೆ, ಎಕ್ಸ್ ಕಾನ್ಸ್ಟೇಬಲ್‌ಗೆ ಒಂದು ಉಪಾಯ ಬರುತ್ತದೆ. ಅದೇನೆಂದರೆ, 'ಬಾಂಬ್ ಇಡುವ ಬದಲು, ಒಂದು ಅಪ್ರಾಪ್ತ ಬಾಲಕಿಯ ಮೇಲೆ, ನಮ್ಮ ಕಡೆಯವನಿಂದಲೇ ಅತ್ಯಾಚಾರ ಕೊಲೆ ಮಾಡಿಸಿ, ದೇವಸ್ಥಾನಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಿ, ದೇವಾಲಯದ ಕೀರ್ತಿಗೆ ಕಳಂಕ ತಂದರೆ ಹೇಗೆ?' ಎಂಬ ಉಪಾಯವನ್ನು ಇವರಿಬ್ಬರ ಮುಂದಿಡುತ್ತಾನೆ. ಅದರಿಂದ ನಮಗೇನು ಲಾಭ? ಎಂದು ಅನ್ಯಕೋಮಿನ ಯುವಕ ಕೇಳಿದಾಗ, 'ನನಗೆ ಕೇರಳ ಕಮ್ಯುನಿಸ್ಟರ ಪರಿಚಯವಿದೆ, ನಾವೀಗ ಅತ್ಯಾಚಾರ ಮಾಡಿಸಿ ಕೊಲೆ ಮಾಡಿಸಿಬಿಟ್ಟರೆ, ಕೋರ್ಟಿಗೆ ಹೋಗುತ್ತದೆ, ಕೋರ್ಟಿನಲ್ಲಿ ಆಪೋಸಿಟ್ ಲಾಯರ್, ಹಾಗೂ ಸಾಕ್ಷಿಗಳನ್ನ ಉಲ್ಟಹೊಡೆಯುವಂತೆ ಫಿಕ್ಸ್ ಮಾಡೋಣ, ಆಗ ರೇಪ್ ಮರ್ಡರ್ ಮಾಡಿದ ನಮ್ಮವನು ಹೊರಬರ್ತಾನೆ, ಆಗ ನಾವು ದೇವಾಲಯದ ಉಸ್ತುವಾರಿ ಹೊತ್ತಿರುವ ಗೌಡರ ಮನೆಯ ಮೇಲೆ ಅಪವಾದ ಹಾಕುವ, ಪ್ರತಿಭಟನೆ ಮಾಡುವ, ಇದಕ್ಕೆ ನಮಗೆ ಕೇರಳದಿಂದ ಹಣ ಕೂಡ ಬರುತ್ತದೆ, ಯಾವ ರೀತಿ ಪ್ರತಿಭಟನೆ ಎಂದರೆ, ದೇವಾಲಯದ ಸುತ್ತಲೂ ಸತ್ತವರೆಲ್ಲರನ್ನೂ ಅವರೆ ಸಾಯಿಸಿದ್ದಾರೆ ಎಂದು ಆರೋಪಿಸೋಣ, ಜೊತೆಗೆ ಇಲ್ಲದೇ ಇರುವ ವ್ಯಕ್ತಿಗಳನ್ನು ಸೃಷ್ಟಿಸೋಣ, ಆಗ ಮರ್ಯಾದೆಗೆ ಅಂಜಿ ಗೌಡರು ಊರು ಬಿಡುತ್ತಾರೆ, ಆಗ ದೇವಸ್ಥಾನಕ್ಕೆ ನುಗ್ಗೋಣ' ಎಂದು ಬಿಡುತ್ತಾನೆ.
ಆಗ ರೌಡಿ ಮತ್ತು ಅನ್ಯಕೋಮಿನ ಯುವಕ ಸರಿ ಎಂದು ಒಪ್ಪುತ್ತಾರೆ, ಅದೇ ಸಮಯದಲ್ಲಿ 'ಸಂದೇಶ್' ಎಂಬಾತನ ಪರಿಚಯವಾಗಿರುತ್ತದೆ, ಆತ ದೊಡ್ಡ ಹೆಣ್ಣು ಬಾಕ ಎಂದು ಗೊತ್ತಿದ್ದ ರೌಡಿ, ಆತನನ್ನ ಈ ಕೃತ್ಯಕ್ಕೆ ಒಪ್ಪಿಸುತ್ತಾನೆ. ರೌಡಿ ದೇವಾಲಯದ ಸ್ಥಳೀಯನೆ ಆಗಿದ್ದರಿಂದ ಯಾವ ಹೆಣ್ಮಕ್ಕಳು ಎಷ್ಟೊತ್ತಿಗೆ ಬರ್ತಾರೆ ಹೋಗ್ತಾರೆ ಅನ್ನೋದರ ಮಾಹಿತಿ ಇರುತ್ತದೆ, ಆಗ ಆತ ಆಯ್ದುಕೊಂಡದ್ದು 'ಸೌಖ್ಯ' ಎಂಬ ಅಪ್ರಾಪ್ತೆಯನ್ನ, ಆಕೆಯನ್ನು 'ಸಂದೇಶ'ನಿಗೆ ತೋರಿಸಿ. ನಾಳೆ ಸಂಜೆ ಈಕೆಯ ಮೇಲೆ ಅತ್ಯಾಚಾರ ಮಾಡಿ ಮುಗಿಸಬೇಕು ಎಂದು ಹೇಳಿ ಹೊರಡುತ್ತಾನೆ.
ಅದರಂತೆ ಆತ ಪಾಪದ 'ಸೌಖ್ಯ'ಳನ್ನ ಬರ್ಬರವಾಗಿ ಅತ್ಯಾಚಾರ ಮಾಡಿ ಕೊಂದು ಬಿಡುತ್ತಾನೆ. ನಂತರ ಇವರ ಪ್ಲಾನಿನ ಪ್ರಕಾರವೇ ದೇವಾಲಯದ ಊರಿನಿಂದ ಎಲ್ಲಿಯೂ ಹೋಗದೆ, ಬೇಕು ಅಂತಲೆ ಪೋಲಿಸರಿಗೆ ಸಿಕ್ಕಿಬೀಳುತ್ತಾನೆ. ಪ್ಲಾನಿನ ಪ್ರಕಾರವೇ ಕೇಸ್ ನಡೆಯುತ್ತದೆ, 'ಸೌಖ್ಯ'ಳ ತಾಯಿ, ಮಾವಂದಿರಿಗೆ ರೌಡಿ ಒಂದಷ್ಟು ಹಣ ನೀಡಿ ಸಾಕ್ಷಿಯನ್ನ ಉಲ್ಟಾ ಹೇಳಿಸುತ್ತಾನೆ, ಇದಕ್ಕೆ ಒಪ್ಪದ 'ಸೌಖ್ಯ'ಳ ತಂದೆಯನ್ನ ಸ್ವತಃ 'ಸೌಖ್ಯ'ಳ ತಾಯಿಯೆ ಸ್ಲೋ ಪಾಯ್ಸನ್ ನೀಡಿ ಸಾಯಿಸಿಬಿಡುತ್ತಾಳೆ, ರೌಡಿ ಅಪೋಸಿಟ್ ಲಾಯರನ್ನೂ ಕೊಂಡುಕೊಳ್ಳುತ್ತಾನೆ. ಕೊನೆಗೆ ಎಲ್ಲವೂ ಇವರ ಪ್ಲಾನಿನಂತೆಯೆ ಸುಗಮವಾಗಿ ನಡೆದು ಇವರ ಕಡೆಯವನೇ ಆದ ಅತ್ಯಾಚಾರಿ 'ಸಂದೇಶ್' ಬಿಡುಗಡೆಯಾಗುತ್ತಾನೆ..!
WRITTEN @ MADHU HOSANAGARA
ಓಡು ಮಹೇಶಣ್ಣ ಓಡು