ಹೌದು, ಕೃಷ್ಣ ಮನಸ್ಸು ಮಾಡಿದ್ರೆ ಬರೀ ಕುರುಕ್ಷೇತ್ರ ಯುದ್ಧ ಮಾತ್ರ ಅಲ್ಲ..., ಇನ್ನೂ ಏನೇನೋ ತಡಿಬಹುದಿತ್ತು. sri-krishna-stop-mahabaratha
- Sep 6, 2025
- 1 min read
Updated: Sep 8, 2025

ಹೌದು, ಕೃಷ್ಣ ಮನಸ್ಸು ಮಾಡಿದ್ರೆ ಬರೀ ಕುರುಕ್ಷೇತ್ರ ಯುದ್ಧ ಮಾತ್ರ ಅಲ್ಲ..., ಇನ್ನೂ ಏನೇನೋ ತಡಿಬಹುದಿತ್ತು. sri-krishna-stop-mahabaratha
ಹೌದು, ಕೃಷ್ಣ ಮನಸ್ಸು ಮಾಡಿದ್ರೆ ಬರೀ ಕುರುಕ್ಷೇತ್ರ ಯುದ್ಧ ಮಾತ್ರ ಅಲ್ಲ..., ಇನ್ನೂ ಏನೇನೋ ತಡಿಬಹುದಿತ್ತು.
• ದೇವಕಿ ವಸುದೇವ ಸೆರೆಮನೆ ಸೇರೋದು ತಡಿಬಹುದಿತ್ತು,
ದೇವಕಿ ವಸುದೇವನನ್ನ ಮದುವೆ ಆಗೋದನ್ನೇ ತಡಿಬಹುದಿತ್ತು, ವೈಕುಂಠದಿಂದಲೇ ದುಷ್ಟರ ನಾಶ ಮಾಡಬಹುದಿತ್ತು.
• ಕೃಷ್ಣನಿಗಿಂತ ಮೊದಲು ಹುಟ್ಟಿ, ಅವನ ಮಾವ ಕಂಸನಿಂದ ಸತ್ತ ತನ್ನ ಅಣ್ಣಂದಿರ ಸಾವನ್ನೂ ತಡಿಬಹುದಿತ್ತು,
ತಾನೇ ಮೊದಲ ಮಗುವಾಗಿ ಹುಟ್ಟಿ ಹುಟ್ತಿದ್ದ ಹಾಗೆ ವಿರಾಟ ರೂಪ ತಗೊಂಡು ಕಂಸನನ್ನು ಕೊಲ್ಲಬಹುದಿತ್ತು.
• ಹುಟ್ಟುತಿದ್ದ ಹಾಗೆ ತಂದೆ ತಾಯಿಯಿಂದ ದೂರಾಗಿ ಇನ್ನೆಲ್ಲೋ ಬೆಳೆಯೋದನ್ನ ತಪ್ಸಿಕೊಳ್ಳೋಬಹುದಿತ್ತು.
• ರಾಶಿ ರಾಶಿ ರಾಕ್ಷಸರು ಗೋಕುಲಕ್ಕೆ, ಬೃಂದಾವನಕ್ಕೆ ಬರೋಕು ಮೊದಲೇ ಸುದರ್ಶನ ಚಕ್ರ ಬಿಟ್ಟು ಅವರನ್ನ ಸಾಯಿಸಬಹುದಿತ್ತು.
• ಹೆತ್ತ ತಾಯಿಯಿಂದ ಅಂತೂ ದೂರ ಆದ, at least ಸಾಕು ತಾಯಿಯಿಂದ ದೂರ ಆಗೋದನ್ನಾದ್ರು ತಡಿಬಹುದಿತ್ತು.
• ರಾಧೆಯ ಸ್ನೇಹ ಕಳ್ಕೊಳ್ಳೋದು ತಡಿಬಹುದಿತ್ತು.
• ಅತ್ತೆ ಮಕ್ಕಳು ಕಾಡಲ್ಲಿ ಹುಟ್ಟಿ, ಕಾಡಲ್ಲಿ ಬೆಳೆದು, ಕೊನೆಗೆ ವಾರಣಾವ್ರತ ಇಂದ ತಪ್ಪಿಸಿಕೊಂಡು ಮತ್ತೆ ಕಾಡು ಪಾಲಾಗಿದ್ದು, ಮತ್ತೆ ಪಗಡೆಯಲ್ಲಿ ಸೋತು ವನವಾಸ, ಅಜ್ಞಾತವಾಸ ಎಲ್ಲವನ್ನೂ ತಡಿಬಹುದಿತ್ತು.
ಅಷ್ಟೇ ಯಾಕೆ, ಪಾಂಡವರಿಗೆ ದುರ್ಯೋಧನ ರಾಜ್ಯ ಕೊಡಲ್ಲ ಕೊನೆಗೆ 5 ಗ್ರಾಮಾನೂ ಕೊಡಲ್ಲ ಅಂದಾಗ ತಾನೇ ಒಂದು ಹೊಸ ರಾಜ್ಯ ಸೃಷ್ಠಿಸಿ ಕೊಡಬಹುದಿತ್ತು, ದುರ್ಯೋಧನ ಅದನ್ನೂ ಕೇಳಿ ಪಾಂಡವರು ಅದನ್ನು ಕಳ್ಕೊಂಡಿದ್ರು ಮತ್ತೆ ಮತ್ತೆ ಹೊಸ ಹೊಸ ರಾಜ್ಯ ಮಾಡಿ ಕೊಡಬಹುದಿತ್ತು.
• ಧೃತರಾಷ್ಟ್ರನಿಗೆ ವಿಕರ್ಣ, ಯುಯುತ್ಸು ಇಬ್ಬರೇ ಮಕ್ಕಳು ಹುಟ್ಟೋಹಾಗು ಮಾಡಬಹುದಿತ್ತು.
• ಸೋದರಳಿಯ, ಅಣ್ಣನ ಮಗಳ ಗಂಡ ಅಭಿಮನ್ಯು ಸಾಯದ ಹಾಗೂ ಮಾಡಬಹುದಿತ್ತು.
• ಗಾಂಧಾರಿ ತನ್ನ ಸಾವು, ತನ್ನ ಕುಲದ ನಾಶಕ್ಕೆ ಶಾಪ ಕೊಡದ ಹಾಗೆ ಅವಳ ಬುದ್ದಿನ ತನ್ನ ವಶದಲ್ಲಿ ಇಟ್ಕೊಬಹುದಿತ್ತು.
• ಯದುಕುಲ ತಿಲಕನ ಮಗ ಸಾಂಬಾ ದೂರ್ವಾಸರ ಶಾಪಕ್ಕೆ ಗುರಿಯಾಗಿ ಯದುಕುಲಕ್ಕೆ ಕಂಟಕನಾಗೊದನ್ನು ತಪ್ಪಿಸಬಹುದಿತ್ತು.
• ಬೆಂಕಿ ನುಂಗಿ, ಬೆಟ್ಟನೆತ್ತಿ, ಕಾಳಿಂಗನ ಹೆಡೆ ಮೆಟ್ಟಿ ಕುಣಿದವನು..., ಬ್ರಹ್ಮ, ಇಂದ್ರ ದೇವತೆಗಳ ಸೊಕ್ಕು ಮುರಿದವನು..., ಕಂಸ, ಶಿಶುಪಾಲ, ನರಕಾಸುರನನ್ನು ಎದುರಿಸಿದವನು ಒಬ್ಬ ಸಾಮಾನ್ಯ ಬೇಡನ ಬಾಣಕ್ಕೆ ಪ್ರಾಣ ಬಿಡೋದನ್ನು ತಪ್ಪಿಸಿಕೊಳ್ಳಬಹುದಿತ್ತು.
ಆದ್ರೆ ಕೃಷ್ಣ ಇದ್ಯಾವುದನ್ನೂ ಮಾಡಲಿಲ್ಲ 🙏🏼
.......,
ನಿಜ ಕೃಷ್ಣ ಇಷ್ಟೆಲ್ಲಾ ಮಾಡಬಹುದಿತ್ತು, ಆದ್ರೆ ಅವ್ನು ಮನುಷ್ಯನಾಗಿ ಹುಟ್ಟಿದ್ದ.
ವಿಷ್ಣುವಿನ ಅವತಾರ ಆದ್ರಿಂದ ಆ ಎಲ್ಲ ಶಕ್ತಿಗಳು ಅವನಲ್ಲಿತ್ತು, ಆದ್ರೆ ಅವ್ನು ಎಲ್ಲೂ ಸುಮ್ನೆ ತನಗಿರೋ supernatural powerನ use as well as misuse ಮಾಡದೆ normal ಮನುಷ್ಯರ ನಡುವೆ, normal ಮನುಷ್ಯನಾಗಿ, ಒಬ್ಬ ಮನುಷ್ಯ ಹೇಗೆ ದೈವತ್ವವನ್ನ ಪಡ್ಕೊಬಹುದು ಅನ್ನೋದನ್ನ ತೋರಿಸಿ ಕೊಡೋಕೆ ಬಂದಿದ್ದ, ತೋರಿಸಿದ ಹೋದ....💙❤️
Comments