top of page

STAR KARNATAKA

ಸ್ಟಾರ್ ಕರ್ನಾಟಕ 

ಧರ್ಮೋ ರಕ್ಷತಿ ರಕ್ಷಿತಃ 

ಸ್ಟಾರ್ ಕರ್ನಾಟಕ 

  • Facebook
  • Twitter
  • Instagram
  • Youtube

What are the pain and symptoms of a heart attack? ಹಾರ್ಟ್ ಅಟ್ಯಾಕ್ ಆದಾಗ ಬರುವ ನೋವು ಮತ್ತು ಲಕ್ಷಣ ಹೇಗಿರುತ್ತದೆ.?

  • Writer: DENIL
    DENIL
  • Sep 1, 2025
  • 2 min read
 What are the pain and symptoms of a heart attack? ಹಾರ್ಟ್ ಅಟ್ಯಾಕ್ ಆದಾಗ ಬರುವ ನೋವು ಮತ್ತು ಲಕ್ಷಣ ಹೇಗಿರುತ್ತದೆ.?
What are the pain and symptoms of a heart attack? ಹಾರ್ಟ್ ಅಟ್ಯಾಕ್ ಆದಾಗ ಬರುವ ನೋವು ಮತ್ತು ಲಕ್ಷಣ ಹೇಗಿರುತ್ತದೆ.?

ಹೃದಯವು ಮನುಷ್ಯನ ಬಹು ಮುಖ್ಯವಾದ ಒಂದು ಅಂಗವಾಗಿದೆ, ಈ ಅಂಗವನ್ನು ಯಾವಾಗಲೂ ಧಕ್ಕೆ ಆಗದ ಹಾಗೆ ನಮ್ಮ ಆಹಾರ ಪದಾರ್ಥಗಳನ್ನು ಅದಕ್ಕೆ ಅನುಗುಣವಾಗಿ ಸರಿಯಾಗಿ ಸೇವಿಸಬೇಕಾಗುತ್ತದೆ,


ಸಾದಾರಣವಾಗಿ ಹೃದಯ ಸ್ತoಬನ ಮನುಸ್ಯನಿಗೆ 40 ವಯಸ್ಸು ಆದ ಮೇಲೆ ಬರುವ ಸಾಧ್ಯತೆ ಇರುತ್ತದೆ,ಹೃದಯ ರೋಗ ಅನುವಂಸಿಕವಾಗಿ ಪೀಳಿಗೆಗೆ ಬರುವ ಕಾರಣದಿಂದ ಇನ್ನೂ ಬೇಗ ಕುಟುಂಬದ ಸದಸ್ಯರಿಗೆ ಹೃದಯ ಸ್ಟoಬನ ಆಗುವ ಸಾಧ್ಯತೆ ಇರುತ್ತದೆ,


ಹೃದಯದ ಕೆಲಸ ನಮ್ಮ ದೇಹದ ಎಲ್ಲಾ ಭಾಗಗಳಿಗೆ ಶುದ್ಧ, ಕೆಟ್ಟ ರಕ್ತ ಮತ್ತು ಆಮ್ಲಜನಕವನ್ನು ಸರಬರಾಜು ಮಾಡುವುದು, ನಮ್ಮ ರಕ್ತನಾಳಗಳು ಸೀದವಾಗಿರದೆ ಅಂಕುಡೋoಕಾಗಿ ಇರುತ್ತದೆ,ನಮ್ಮ ದೇಹದ ಎಲ್ಲಾ ಭಾಗಗಳಿಗೆ ರಕ್ತ,ಆಮ್ಲಜನಕವನ್ನು ಕಳುಹಿಸಲು ಹೃದಯವು ಯಾವಾಗಲೂ ಅದರ ಸ್ನಾಯುಗಳಿಂದ ಪಂಪ್ ಮಾಡಿ ಸಾಕಷ್ಟು ಒತ್ತಡದಿಂದ ರಕ್ತವನ್ನು ಕಳುಹಿಸಬೇಕಾಗುತ್ತದೆ,


ರಕ್ತನಾಳಗಳ ಒಳಗೆ ಕೊಬ್ಬು, ಇತರ ಕೆಟ್ಟ ವಸ್ತುಗಳು ನಿಂತು ರಕ್ತ ಹೋಗುವ ದಾರಿಯನ್ನು ತಡೆ ಮಾಡಿದಾಗ,ಹೃದಯಕ್ಕೆ ಸಾಕಷ್ಟು ರಕ್ತ ಸಿಗದ ಕಾರಣ ಅದು ತನ್ನ ಸ್ನಾಯುಗಳಿಗೆ ರಕ್ತವನ್ನು ಪಂಪ್ ಮಾಡಲು ಆಗದೆ ತನ್ನ ಕೆಲಸವನ್ನು ನಿಲ್ಲಿಸುತ್ತದೆ, ಈ ಸ್ಥಿತಿಗೆ ಹೃದಯ ಸ್ತoಬನ ಅನ್ನುತ್ತಾರೆ(heart attack),


ಹೃದಯ ಸ್ತoಬನ ಆಗುವಾಗ ರೋಗಿಗಳಿಗೆ ದೇಹದ ಎಡ ಭುಜದಲ್ಲಿ, ಎಡ ಕೈಯ್ಯಲ್ಲಿ, ಎಡ ಭಾಗದ ಎದೆಯಲ್ಲಿ, ಅತೀವ ನೋವು ಕಾಣಿಸಿಕೊಳ್ಳುತ್ತದೆ, ದೇಹದ ಎಡ ಭಾಗದಲ್ಲಿ ಒಳಗಿಂದೊಳಗೆ ದೇಹದ ಅಂಗಗಳು ಸೆಳೆದು ಕೊಂಡು ಸೂಜಿಯಿಂದ ಜೋರಾಗಿ ಚುಚ್ಚಿಕೊಂಡ ಹಾಗೆ ಆಗುತ್ತದೆ, ಉಸಿರಾಡಲು ತುಂಬಾ ಕಷ್ಟ ಆಗುತ್ತದೆ, ದೇಹದ ಮೂಳೆಗೆ ರಕ್ತದ, ಆಮ್ಲಜನಕದ ಸರಬರಾಜು ಆಗದೆ ಪ್ರಜ್ಞೆ ತಪ್ಪಿ ಕೆಳಗೆ ಬೀಳುತ್ತಾರೆ,


ಹೃದಯ ಸ್ತoಬನ ಆದ ಒಂದು ಗಂಟೆಯ ಒಳಗಿನ ಸಮಯವನ್ನು *ಗೋಲ್ಡನ್ ಹವರ್ *(golden hour) ಅನ್ನುತ್ತಾರೆ, ಈ ಅವಧಿಯ ಒಳಗೆ ಪ್ರಥಮ ಚಿಕಿತ್ಸೆ ಮಾಡಿ, ಆಸ್ಪತ್ರಗೆ ರೋಗಿಯನ್ನು ಕರೆದುಕೊಂಡು ಹೋದರೆ ಅವರು ಜೇವದಿಂದ ಉಳಿಯುವ ಸಾಧ್ಯತೆ ಹೆಚ್ಚು ಇರುತ್ತದೆ, ಒಂದು ಗಂಟೆಯ ನಂತರ ಜೀವ ಉಳಿಯುವ ಸಾಧ್ಯತೆ ಕಮ್ಮಿ ಆಗುತ್ತಾ ಹೋಗುತ್ತದೆ,


ಹೃದಯದ ರೋಗ ಇರುವವರು ಹೆಚ್ಚು ಕಷ್ಟದ ಕೆಲಸ ಮಾಡಬಾರದು, ಆವೇಶ, ಉದ್ವೇಗ, ಸಿಟ್ಟು, ಚಿಂತೆ ಮಾಡಬಾರದು, ಬಸ್ಸು, ರೈಲು ಹಿಡಿಯಲು ಒಡಬಾರದು, ಮಹಡಿಯ ಮೆಟ್ಟಿಲುಗಳನ್ನು ಎರಬಾರದು, 50 ವಯಸ್ಸು ಆದಮೇಲೆ ವಾಹನವನ್ನು ಚಲಿಸಬಾರದು, ಒಬ್ಬಂಟಿಯಾಗಿ ಎಲ್ಲೂ ಹೋಗಬಾರದು,ಅವರ ಜೇಬಿನಲ್ಲಿ ಗುರುತು ಚೀಟಿ, ನೆಂಟರ ಫೋನ್ ನಂಬರ್ ಇರಬೇಕು,ಮತ್ತು ಅಸ್ಪಿರಿನ್ ಮಾತ್ರೆಗಳನ್ನು ಇಟ್ಟುಕೊಂಡಿರಬೇಕು,


ಹೃದಯದ ರೋಗಕ್ಕೂ, ರಕ್ತದ ಒತ್ತಡಕ್ಕೂ ಹತ್ತಿರದ ಸಂಬಂಧ ಇರುತ್ತದೆ, ಆದ್ದರಿಂದ ರೋಗಿಗಳು ರಕ್ತ ಒತ್ತಡ ಪರಿಶೋಧಖ ಯಂತ್ರವನ್ನು ಖರೀದಿಸಬೇಕು( digital blood pressure testing machine, ಇದರ ಬೆಲೆ ₹1500/ ಇರುತ್ತದೆ,), ಆರೋಗ್ಯವಂತರ ರಕ್ತ ಒತ್ತಡದ ಸಂಖ್ಯೆ 120/80 ಇರುತ್ತದೆ,3 ದಿನಕ್ಕೊಮ್ಮೆ ತಮ್ಮ ರಕ್ತದ ಒತ್ತಡದ ಸಂಖ್ಯೆ ನೋಡಿ ಅದರಂತೆ ಆಹಾರ ಪದ್ದತಿಯನ್ನು ಬದಲಾಯಿಸಬೇಕು,


ಹೆಚ್ಚು ಕೊಬ್ಬು ಇರುವ, ಎಣ್ಣೆಯ, ಕರಿದ ಪದಾರ್ಥಗಳನ್ನು ಸೇವಿಸ ಬಾರದು,


ಹೃದಯ ರೋಗಿಗಳು ತಿಂಗಳಿಗೊಮ್ಮೆ, ಎರಡು ತಿಂಗಳಿಗೊಮ್ಮೆ ತಮ್ಮ ಹೃದಯದ ವೈದ್ಯಕೀಯ ತಪಾಸಣೆ ಮಾಡಿಸಬೇಕು,.


ಹೃದಯ ರೋಗಿಗಳು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿದರೆ, ಜನ ಸಾಮಾನ್ಯರಂತೆ ಬದುಕಬಹುದು,.


Comments

Rated 0 out of 5 stars.
No ratings yet

Add a rating
bottom of page