top of page

STAR KARNATAKA

ಸ್ಟಾರ್ ಕರ್ನಾಟಕ 

ಧರ್ಮೋ ರಕ್ಷತಿ ರಕ್ಷಿತಃ 

ಸ್ಟಾರ್ ಕರ್ನಾಟಕ 

  • Facebook
  • Twitter
  • Instagram
  • Youtube

EAST INDIA COMPANY ಬ್ರಿಟೀಷರು ವ್ಯಾಪಾರಕ್ಕೆ ಬಂದ್ರು, ನಮ್ಮವರನ್ನೇ ಒಡೆದು, ನಮ್ಮವರನ್ನೇ ಬಳಸಿಕೊಂಡು, ನಮ್ಮವರನ್ನೇ ಸೋಲಿಸಿ ಆಳಿದ್ರು

  • Writer: DENIL
    DENIL
  • Sep 6
  • 4 min read

Updated: Sep 8

ಸಣ್ಣ ಇದ್ದಾಗ ಬ್ರಿಟೀಷರು ವ್ಯಾಪಾರಕ್ಕೆ ಬಂದ್ರು, ನಮ್ಮವರನ್ನೇ ಒಡೆದು, ನಮ್ಮವರನ್ನೇ ಬಳಸಿಕೊಂಡು, ನಮ್ಮವರನ್ನೇ ಸೋಲಿಸಿ ಆಳಿದ
ಸಣ್ಣ ಇದ್ದಾಗ ಬ್ರಿಟೀಷರು ವ್ಯಾಪಾರಕ್ಕೆ ಬಂದ್ರು, ನಮ್ಮವರನ್ನೇ ಒಡೆದು, ನಮ್ಮವರನ್ನೇ ಬಳಸಿಕೊಂಡು, ನಮ್ಮವರನ್ನೇ ಸೋಲಿಸಿ ಆಳಿದ್ರು.

ಸಣ್ಣ ಇದ್ದಾಗ ಬ್ರಿಟೀಷರು ವ್ಯಾಪಾರಕ್ಕೆ ಬಂದ್ರು, ನಮ್ಮವರನ್ನೇ ಒಡೆದು, ನಮ್ಮವರನ್ನೇ ಬಳಸಿಕೊಂಡು, ನಮ್ಮವರನ್ನೇ ಸೋಲಿಸಿ ಆಳಿದ್ರು... ದೇಶ ಬಿಟ್ಟು ಹೋಗಿ ಅಂತ ಅವರ ವಿರುದ್ಧ ಜನ ಪ್ರತಿಭಟನೆ ಮಾಡಿದ್ರು ಅಂತ ಕೇಳುವಾಗ ತುಂಬಾ ಹೆಮ್ಮೆ ಆಗೋದು, ಅಬ್ಬಾ ಅಂತೂ ಸ್ವಾತಂತ್ರ್ಯ ಸಿಕ್ತು ಅಂತ ಒಂತರ ಖುಷಿ ಆಗೋದು, happy Independence Day ಅಂತ ರಂಗೋಲಿ ಬರಿತಿದ್ವಿ, school ಅಲ್ಲಿ dance ಮಾಡ್ತಿದ್ವಿ, ಒಂದು ರೀತಿ ಹಬ್ಬ ಅನ್ನಿಸೋದು...🥰


ಅಷ್ಟೇ ಚೆನ್ನಾಗಿತ್ತು... ನಾನ್ ಇದರ ಬಗ್ಗೆ ಓದಬಾರದಿತ್ತು 🥺 EAST INDIA COMPANY


____________________________________________


ಮೊದಲು ಲೂಟಿ ಬಗ್ಗೆ ನೋಡಿದೆ,


ನಂಗೆ ಬ್ರಿಟೀಷರು ಭಾರತದ 45 trillion dollars ಸಂಪತ್ತನ್ನು ಲೂಟಿ ಮಾಡಿದ್ರು ಅನ್ನೋದು ಮೊದಲು ತುಂಬಾ ಸಿಟ್ಟು ಬರಿಸ್ತು..., 45 trillion dollars ಅಂದ್ರೆ

45,000,000,000,000 * 4.16 (ಆಗಿನ ಬೆಲೆ) = 18720000,00,00,000

ಒಂದು ಕೋಟಿ ಎಂಬತ್ತೇಳು ಲಕ್ಷದ ಇಪ್ಪತ್ತು ಸಾವಿರ ಕೋಟಿ


ಈ ಸಂಖ್ಯೆ ಬರೆಯೋಕೆ ನಾನ್ 2,3 ಸಾರಿ ತಪ್ಪು ಮಾಡಿದೆ.

ಒಂದು ಕೋಟಿ ಅಲ್ಲ ಎರಡು ಕೋಟಿ ಅಲ್ಲ... ನೂರು ಕೋಟಿ ಅಲ್ಲ, ಸಾವಿರ ಕೋಟಿ ಅಲ್ಲ, ಕೋಟ್ಯಂತರ ಕೋಟಿ 😲

ಯಾವುದ್ರಿ ಹಾವಾಡಿಗರು, ಕೋತಿ ಕುಣಿಸೋವ್ರ ದೇಶ?


ನಮ್ಮ ಕರ್ನಾಟಕದ ಹಂಪೆ... ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಬೀದಿಯಲ್ಲಿ ಮುತ್ತು ರತ್ನ ಮಾರ್ತಾರೆ ಅಂತ famous ಆಗಿಲ್ವಾ? ಪ್ರಪಂಚದ 2ನೇ ಶ್ರೀಮಂತ ನಗರ (ಬೀಜಿಂಗ್ 1st richest city) ಆಗಿ ಮೆರೆದಿರಲಿಲ್ವಾ...? ವಿದೇಶಿ ರಾಜರುಗಳು ಜೀವನದಲ್ಲಿ ಒಮ್ಮೆ ಹಂಪಿ ನೋಡಬೇಕು ಅಂತ ಆಸೆ ಪಡ್ತಾ ಇರ್ಲಿಲ್ವಾ?

ನಮ್ಮ ದೇಶದ ಬರೀ ಒಂದು ಸಾಮ್ರಾಜ್ಯದ ಒಂದು ಊರಲ್ಲ, ನಮ್ಮ ಇಡೀ ದೇಶ ಹಿಂಗೆ ಸಂಪತ್ತಿನಿಂದ ತುಂಬಿ ತುಳುಕ್ತಿತ್ತು.


ಅದಕ್ಕೆ ತಾನೇ ಪೋರ್ಚುಗೀಸ್, ಡುಚ್, ಮೊಘಲ್, ಬ್ರಿಟೀಷ್ ಅಂತ ಎಲ್ಲಾ ಬಂದು ಬಂದು ಲೂಟಿ ಮಾಡಿದ್ದು,

ನಮ್ಮ ದೇಶದಲ್ಲಿ ಲೂಟಿ ಮಾಡಿದ ಸಂಪತ್ತನ್ನ ಹಡಗಲ್ಲಿ ತುಂಬಿಸಿಕೊಂಡು ಹೋಗ್ತಾ ಇದ್ರೆ ಆ ಹಡಗುಗಳನ್ನು ಲೂಟಿ ಮಾಡೋಕೆ ಕಾಯ್ತಾ ಇದ್ರಂತೆ ಬೇರೆಯವರು... ಲೂಟಿಯನ್ನು ಲೂಟಿ ಮಾಡೋಕೆ ಬೇರೆ ದೇಶದ ರಾಜರು ಸಂಬಳ ಕೊಟ್ಟು ಸಮುದ್ರಗಳ್ಳರನ್ನ ಇಟ್ಟಿದ್ರಂತೆ.

ಇರ್ಲಿ.... ಹಣ ಯಾರ ಹತ್ರಾನೂ ಶಾಶ್ವತವಾಗಿ ಇರಲ್ಲ.


____________________________________________


ಧನ ಆದ ಮೇಲೆ, ಮಾನ... ಅದ್ರಲ್ಲೂ ಹೆಣ್ಣು ಮಕ್ಕಳ ಮಾನದ ಬಗ್ಗೆ ನೋಡೋಣ,


ಮಹಾರಾಷ್ಟ್ರದ ನಾಗ್ಪುರದ ಚಿಮೂರು ಅನ್ನೋ ಒಂದು ಊರಿನ ಲೆಕ್ಕ ನೋಡೋಣ, ಆ ಊರಿನ ಜನಸಂಖ್ಯೆ 5000 ಅಂತೆ, ಅದ್ರಲ್ಲಿ 400ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ಬ್ರಿಟೀಷರು ಬಲಾತ್ಕಾರ ಮಾಡಿದ್ರು.

ಒಬ್ಬರಿಗಿಂತ ಹೆಚ್ಚು ಜನ, ಒಂದಕ್ಕಿಂತ ಹೆಚ್ಚು ಸಲ, ಗರ್ಭಿಣಿ/ ಬಾಣಂತಿ/ 10,11,12 ವರ್ಷದವಳು..., ಯಾರಂದ್ರೆ ಅವ್ರು, ಎಲ್ಲಂದ್ರೆ ಅಲ್ಲಿ, even ರಸ್ತೆ ಮಧ್ಯ..... ತಡೆಯೋಕೆ ಬಂದವರನ್ನ ಹೊಡೆದು ಹಿಂಸೆ ಮಾಡೋದು.


ಇದು ಬರೀ ಒಂದು ಊರಿನ ಲೆಕ್ಕ...,

N ಪ್ರತೀ ಊರು ಈ ನರಕ ನೋಡಿದೆ.

____________________________________________


ಈಗ ಪ್ರಾಣದ ಬಗ್ಗೆ ನೋಡೋಣ...,


18th century ಅಷ್ಟೊತ್ತಿಗೆ ನಮ್ಮ ಜನಸಂಖ್ಯೆ ಸುಮಾರು 16ರಿಂದ 18 ಕೋಟಿ ಇತ್ತಂತೆ.

1757 ರಿಂದ 1947ರವರೆಗೆ ಅಂದ್ರೆ 190 ವರ್ಷದಲ್ಲಿ ಅವ್ರು ಕೊಂದಿದ್ದು ಎಷ್ಟು ಜನರನ್ನ ಗೊತ್ತಾ...?

ನಿಜ ನಂಬೋಕೆ ಆಗಲ್ಲ, ನಂಗೂ ಆಗ್ತಿಲ್ಲ.


ಸುಮಾರು 60,00,000 ದಿಂದ 1,00,00,000 ಅಂತಾರೆ.

ಅಂದ್ರೆ 5.55%, ನೂರಕ್ಕೆ 5,6 ಜನ ಪ್ರಾಣ ಕಳ್ಕೊಂಡಿದಾರೆ.

No words....🥹


____________________________________________


ಈಗ ಹೇಳಿ...

ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ಕೊಡಿ ಅಂತ,

ಒಬ್ಬ ಮಗಳನ್ನ ಹೊತ್ಕೊಂಡು ಹೋದ್ರೆ ಇನ್ನೊಬ್ಬ ಮಗಳನ್ನ ಕಳಿಸಿ..., ಒಬ್ಬ ಮಗನನ್ನ ಕೊಂದ್ರೆ ಇನ್ನೊಬ್ಬ ಮಗನನ್ನ ಕೊಲ್ಲೋಕೆ ಬಿಡಿ...,

ಶಾಂತಿ, ಸಹನೆ ಪಾಠ ಮನುಷ್ಯರಿಗೆ, ಇಲ್ಲ ಮೃಗಗಳಿಗೂ ಅರ್ಥ ಆಗಬಹುದು, ಆದ್ರೆ ಅವ್ರು ರಾಕ್ಷಸರಿಗಿಂತ ಕೆಟ್ಟವರು, ಅವ್ರಿಗೆ ಅವೆಲ್ಲ ಅರ್ಥ ಆಗುತ್ತಾ? N ಅವ್ರು ನಮ್ಮ ಶಾಂತಿ, ಸಹನೆ deserve ಮಾಡ್ತಾರಾ?

ಹ್ಮ್ಮ್ ಮಾಡ್ತಾರೆ ಅನ್ನೋವ್ರಿಗೆ ಒಳ್ಳೆದಾಗಲಿ 👍🏼


ನಮ್ಮ ಮನೆಗೆ ಕಳ್ಳರು ಬಂದು ದೋಚಿ ಹೋಗ್ತಾ ಇದ್ರೆ ಸುಮ್ನೆ ಕೂರಬಹುದೇನೋ.., ಆದ್ರೆ ಮನೆ ಹೆಣ್ಣು ಮಕ್ಕಳನ್ನು rap€ ಮಾಡಿ, ಮನೆಯವರನ್ನು ಕೊಲ್ತಾ ಇದ್ರೆ ನಾನಂತೂ ಕೈ ಕಟ್ಕೊಂಡು ಬಾಯಲ್ಲಿ ನಿಲ್ಸಿ ನಿಲ್ಸಿ ಅನ್ತಾ ಕೂರಲ್ಲ,

ನನ್ ಜೀವ ಹೋಗುತ್ತೆ ಅಂದ್ರೂ ನನ್ ಜೀವ ಹೋಗೊವರೆಗೂ ಆದ್ರೂ ನಾನ್ ಅವ್ರ ಮೇಲೆ atttack ಮಾಡ್ತೀನಿ, ಈ condition ಅಲ್ಲಿ ನಾನ್ ಕ್ರಾಂತಿಕಾರಿಗಳ ಪರ.

____________________________________________


ಅವ್ರು ಶಾಂತಿಯುತವಾಗಿ ಹೋರಾಟ ಮಾಡಿದವರಿಗೆ ಏನೂ ಮಾಡಲ್ಲ, ಬರೀ ಜೈಲಿಗೆ ಕಳಿಸೋದು, ವಾಪಾಸ್ ಬಿಡೋದು ಮಾಡ್ತಾರೆ ಅನ್ನೋದೇ ನಿಜ ಆಗಿದ್ರೆ ಲಾಲಾ ಲಜಪತ ರಾಯ್ ಅವ್ರು 60 ದಾಟಿದ ವ್ಯಕ್ತಿ..., ಬ್ರಿಟೀಷರ ವಿರುದ್ಧ ಅವರೂ ಶಾಂತಿಯುತವಾಗೇ ಪ್ರತಿಭಟನೆ ಮಾಡ್ತಾ ಇದ್ರು, ಮತ್ಯಾಕೆ ಅವರಿಗೆ ಸಾಯೋಹಾಗೆ ಹೊಡೆದ್ರು?

ಹಾಗಾದ್ರೆ ಅದೇ ಹೊಡೆತ ಬೇರೆಯವರಿಗೆ ಯಾಕೆ ಬಿದ್ದಿರಲಿಲ್ಲ?

ಯಾರೇ ಆಗಲಿ ಕೊಲ್ಲೋದು ಅವ್ರಿಗೆ ತೊಂದ್ರೆ ಕೊಡೋವ್ರನ್ನ, support ಮಾಡೋವ್ರನ್ನಲ್ಲ.


ಇರ್ಲಿ... ಅದಕ್ಕೆ ಪ್ರತೀಕಾರ ತಗೊಳ್ತೀವಿ ಅಂತ ಬಂದ ಭಗತ್ ಸಿಂಗ್ ಅವ್ರನ್ನ ಗಲ್ಲಿಗೇರಿಸಿದಾಗ ಅವ್ರಿಗೆ ಬರೀ 23 ವರ್ಷ,

ಅವರ ಜೊತೆ ಸಾವನ್ನ ಹಂಚ್ಕೊಂಡ ಶಿವರಾಮ್ ರಾಜಗುರು ಅವ್ರಿಗೆ 22 ವರ್ಷ, ಸುಖದೇವ್ ಥಾಪರ್ ಅವರಿಗೂ 23 ವರ್ಷ ಅಷ್ಟೇ... 😢 ನಮಗಿಂತ ಚಿಕ್ಕವರು (ವಯಸ್ಸಲ್ಲಿ), ನಮ್ಮ ತಮ್ಮಂದಿರೇ ಆಗಿದ್ರೆ ಆ ಕ್ರೂರಿ ಬ್ರಿಟೀಷರ ವಿರುದ್ಧ ಹೋರಾಡೋಕೆ ನಾವು ಕಳಿಸ್ತಾ ಇದ್ವಾ?

ಬೇಡಪ್ಪಾ... ಎಲ್ರಿಗೂ ಆದಂಗೆ ನಮಗೂ ಆಗುತ್ತೆ, ನೀನ್ ಅಂತದ್ದಕ್ಕೆಲ್ಲ ಹೋಗ್ಬೇಡ ಅಂತಿದ್ವಿ, ನಾನಂತೂ ಅಂತಿದ್ದೆ 😢

ಅವರನ್ನ ಗಲ್ಲಿಗೆ ಹಾಕಿದ್ರಲ್ಲ... At least ಅವ್ರ ದೇಹ ಆದ್ರೂ ಮನೆಯವರಿಗೆ ಕೊಟ್ರಾ? ಇಲ್ಲ ತುಂಡು ತುಂಡು ಮಾಡಿ ಹಿಂದಿನ gate ಇಂದ ದೂರ ತಗೊಂಡು ಹೋಗಿ ಸುಟ್ಟು ಹಾಕಿದ್ರು.

ಅವ್ರು ಹೇಳಿದ್ದು ಸರಿ ಇದೆ... ಇಂಥಾ ಕ್ರೂರಿಗಳು ವಿರುದ್ಧದ ಕ್ರಾಂತಿ ನಿಲ್ಲಬಾರದು, ಇಂಕಿಲಾಬ್ ಜಿಂದಾಬಾದ್


ಅವ್ರ ಹೆಸರು ಚಂದ್ರಶೇಖರ... ಆದ್ರೆ ನನ್ನ ಯಾರೂ ಬಂದಿಸೋಕಾಗಲ್ಲ ನನ್ನ ಸ್ವಾತಂತ್ರ್ಯ ಯಾರೂ ಕಿತ್ಕೊಳ್ಳೋಕೆ ಆಗಲ್ಲ, ನನ್ನ ಹೆಸರು ಆಜಾದ್ ಅಂತ ಹೇಳಿಕೊಂಡು ಹೋರಾಡಿ ಬ್ರಿಟಿಷರ ನಿದ್ದೆಗೆಡಿಸಿ ಸಿಕ್ಕಾಕ್ಕೊಂಡಾಗ ಜೊತೆಗಿದ್ದವರನ್ನ ಕಾಪಾಡಿ ಇನ್ನು ತನ್ನ ಸೆರೆ ಹಿಡಿತಾರೆ ಅಂದಾಗ ನಾನು ಇವರ ಸೆರೆ ಒಪ್ಪಲ್ಲ, ಇವ್ರ ಕೈಯ್ಯಲ್ಲಿ ಸಾಯಲ್ಲ ಅಂತ ಕೊನೆಯ ಗುಂಡನ್ನ ತನಗೆ ತಾನೇ ಹಾರಿಸಿಕೊಂಡ ಅವ್ರೇ ಭಾರತದಲ್ಲಿ ಮೊದಲು ಸ್ವಾತಂತ್ರ್ಯ ಪಡೆದ ವ್ಯಕ್ತಿ ಅನ್ಸತ್ತೆ.


ಸುಭಾಷ್ ಚಂದ್ರಬೋಸ್ ಅವ್ರ ಸಾಧನೆ ಏನ್ ಕಡಿಮೇನಾ...? ದೇಶ ವಿದೇಶ ಸುತ್ತಿ ಒಂದು ದೊಡ್ಡ ಸೇನೆಯನ್ನೇ ಕಟ್ಟಿದವರು,

ನಾನಲ್ಲ... ಅಂಬೇಡ್ಕರ್ ಅವ್ರು ಹೇಳ್ತಾರಂತೆ ಸ್ವಾತಂತ್ರ್ಯಕ್ಕೆ ಕಾರಣ it was not ಗಾಂಧಿ, it was ಸುಭಾಷ್ ಚಂದ್ರಬೋಸ್ ಅಂತ.


ಝಾನ್ಸಿ ರಾಣಿ ಲಕ್ಷ್ಮೀಬಾಯಿ, ನಮ್ಮ ಚೆನ್ನಮ್ಮ, ರಾಯಣ್ಣ, ಬಾಲ ಗಂಗಾಧರ ತಿಲಕ್, ಸರ್ದಾರ್ ವಲ್ಲಭಭಾಯ್ ಪಟೇಲ್, ಸರೋಜಿನಿ ನಾಯ್ಡು, ಮಂಗಲ್ ಪಾಂಡೆ.... ಇನ್ನೂ ಎಷ್ಟೋ ಹೆಸರು ಕೇಳಿದೀವಿ.

ಅವರಷ್ಟೇ ಅಲ್ಲ, ಈ ನೆಲವನ್ನ ಸ್ವಾತಂತ್ರವಾಗಿಸೋಕಾಗಿ ಹೆಸರೇ ಗೊತ್ತಿಲ್ಲದ ಲಕ್ಷ, ಕೋಟಿ ಜನ ಈ ಮಣ್ಣಲ್ಲಿ ಮಣ್ಣಾಗಿದಾರೆ.


ಅಷ್ಟೇ ಯಾಕೆ... ಸಮಾಜ ಕೀಳಾಗಿ ಕಾಣೋ ವೇಶ್ಯೆಯರು ತಮ್ಮ ಸಂಪಾದನೆ contribute ಮಾಡಿದಾರೆ, dance ನಡೆಸೋ place... ಅದಕ್ಕೆ ಏನ್ ಹೇಳ್ತಾರೆ ಹೆಸರು ನೆನಪಾಗ್ತಾ ಇಲ್ಲ, ಅವ್ರು ಅವ್ರ place ಅಲ್ಲಿ freedom fighters meeting ಮಾಡಿಕೊಳ್ಳೋಕೆ arrage ಮಾಡಿ ಕೊಡ್ತಿದ್ರಂತೆ.... 🙏🏼🙏🏼


ಎಷ್ಟು ತಂದೆ ತಾಯಂದಿರು ಇಳಿ ವಯಸ್ಸಿನಲ್ಲಿ ಎಳೆ ವಯಸ್ಸಿನ ಮಕ್ಕಳನ್ನ ಕಳ್ಕೊಂಡ್ರೋ,

ಎಷ್ಟು ಹೆಣ್ಣು ಮಕ್ಕಳು ತಾಳಿ ಕಳಚಿತೋ,

ಎಷ್ಟು ಹೆಣ್ಣು ಮಕ್ಕಳನ್ನ ಹಾಸಿಗೆಗೆ ಹೊತ್ತು ಒಯ್ದ್ರೋ,

ಎಷ್ಟು ಮಕ್ಕಳು ಅನಾಥರಾಗಿ ವಿದ್ಯೆ, ಪೋಷಣೆ ಇಂದ ವಂಚಿತರಾದ್ರೋ...


ಆವತ್ತು ಅವ್ರು ಯಾರೂ ಅವ್ರ ಸುಖ, ಅವ್ರ ಲಾಭ ನೋಡಲಿಲ್ಲ, ಈ ದೇಶ ನಮ್ಮದು... ನಮ್ಮವರು ಸ್ವಾತಂತ್ರ್ಯವಾಗಿರಬೇಕು (ಅಂದ್ರೆ ನಮಗೆ ಬೇಕಾದ ಹಾಗೇ ಇರೋದಲ್ಲ, ಅದು ಸ್ವೇಚ್ಛಾಚಾರ ಆಗುತ್ತೆ) ಸ್ವಾತಂತ್ರ್ಯ ಅಂದ್ರೆ ಆಗ ನಡಿತಿದ್ದ ಮಾನ, ಪ್ರಾಣ ಹಾನಿ ನಿಲ್ಲಬೇಕು, ನಾವು ಸತ್ತರೂ ಉಳಿದವರಾದ್ರೂ ನೆಮ್ಮದಿಯಾಗಿ ಜೀವನ ಮಾಡಬೇಕು ಅಂತ ಹೋರಾಡಿ ದೇವರಾದ್ರು.... 🙏🏼


___________________________________________


ಸ್ವಾತಂತ್ರ್ಯ ಇದೆ ಅನ್ನೋದು ಖುಷೀನೇ,

ಆದ್ರೆ ಅದರ ಹಿಂದೆ ಇಂಥ ನೋವಿದೆ ಅಂತ ಓದಿದ ಮೇಲೆ ನಂಗೆ Happy Independence Day ಅನ್ನೋಕೆ ಆಗ್ತಿಲ್ಲ, sorry 😔🙏🏼


ಅಮ್ಮ ಭಾರತಾಂಬೆ ನೀನು ಬರೀ ಭೂಮಿಯ ತುಂಡಲ್ಲ,

ಬರೀ ಭೂಮಿಯ ತುಂಡೆ ಆಗಿದ್ರೆ ಆ ನಿನ್ನ ಮಕ್ಕಳು ನಿನಗಾಗಿ ಪ್ರಾಣ ಕೊಡ್ತಾ ಇರ್ಲಿಲ್ಲ, ಅಂಥ ಮಕ್ಕಳನ್ನ ಪಡೆದ ನೀನೇ ಪುಣ್ಯವಂತೆ, ಇಂಥ ಪುಣ್ಯ ಕ್ಷೇತ್ರದಲ್ಲಿ ಹುಟ್ಟೋಕೆ ನಾವೂ ಅದೆಷ್ಟು ಪುಣ್ಯ ಮಾಡಿದ್ವೋ 🙏🏼🙏🏼

ನಾವು ಅವ್ರ ಹಾಗೆ ಆಗೋಕೆ ಆಗಲ್ಲ,

At least ಅವ್ರು ಪ್ರಾಣ ಕೊಟ್ಟು ಕೊಡಿಸಿದ ಸ್ವಾತಂತ್ರ್ಯ ದುರ್ಬಳಕೆ ಮಾಡದೇ, ಅವ್ರು ಪ್ರಾಣ ಕೊಟ್ಟ ದೇಶಕ್ಕೆ ಒಳ್ಳೇದು ಮಾಡೋಕೆ ಆಗಿಲ್ಲ ಅಂದ್ರೂ ಕೆಟ್ಟದ್ದು ಮಾಡದೇ ಬದುಕಿ ಸತ್ತು ಹೋಗೋಣ.


Comments

Rated 0 out of 5 stars.
No ratings yet

Add a rating
bottom of page