ಆಂಜನೇಯ ಉದಯಿಸ್ತಾ ಇರೋ ಸೂರ್ಯನನ್ನ ಹಣ್ಣು ಅಂತ ತಿನ್ನೋಕೆ ಹಾರಿದಾಗ ಅರುಣ ಸೂರ್ಯನನ್ನ ಕರ್ಕೊಂಡು ಹೋಗ್ತಿದ್ದ ANJANEYA
- DENIL

- Sep 6, 2025
- 1 min read

ಆಂಜನೇಯ ಉದಯಿಸ್ತಾ ಇರೋ ಸೂರ್ಯನನ್ನ ಹಣ್ಣು ಅಂತ ತಿನ್ನೋಕೆ ಹಾರಿದಾಗ ಅರುಣ ಸೂರ್ಯನನ್ನ ಕರ್ಕೊಂಡು ಹೋಗ್ತಿದ್ದ ರಥಕ್ಕೆ ಅಡ್ಡಿ ಆಗುತ್ತೆ. ANJANEYA
ಆದ್ರೆ ಸೂರ್ಯ ಹೊತ್ತಿಗೆ ಸರಿಯಾಗಿ ತಾನು ಹೋಗಬೇಕಾದ ಕಡೆ ಹೋಗಲೇಬೇಕು... ಇಲ್ಲ ಅಂದ್ರೆ ಅದ್ರಿಂದ ಇಡೀ ಸೃಷ್ಠಿಗೆ ತೊಂದರೆ ಉಂಟಾಗುತ್ತೆ ಅಂದಾಗ ಇಂದ್ರ ಆಂಜನೇಯನಿಗೆ ಅವರು ಹೋಗಲೇಬೇಕು ದಾರಿ ಬಿಡು ಅಂತಾರೆ,
ಆದ್ರೆ ಆಂಜನೇಯ ಪಾಪ ಚಿಕ್ಕ ಹುಡುಗ..., ಮಾತು ಕೇಳಲ್ಲ, ಆಗ ಇಂದ್ರ ಬೇರೆ ದಾರಿ ಇಲ್ಲದೆ ಅವನನ್ನ ಸರಿಸಿ ಸೂರ್ಯನಿಗೆ ಮುಂದೆ ಕಳಿಸಬೇಕು ಅಂತ ಆಂಜನೇಯನ ಮೇಲೆ ವಜ್ರಾಯುಧದಿಂದ ಪ್ರಹಾರ ಮಾಡ್ತಾರೆ.
ವಜ್ರಾಯುಧದಿಂದ ಹೊಡೆತ ತಿಂದ ಆಂಜನೇಯ ಮೇಲಿಂದ ಬೀಳುವಾಗ ತನ್ನ ವರದಿಂದ ಹುಟ್ಟಿದ ಮಗುವಿಗೆ ಹೀಗಾಯ್ತು ಅಂತ ಕೋಪಗೊಂಡ ವಾಯುದೇವ ಆಂಜನೇಯನನ್ನ ಎತ್ಕೊಂಡು ಗುಹೆಯಲ್ಲಿ ಹೋಗಿ ಕೂರ್ತಾರೆ.
ಪ್ರಾಣವಾಯು ಇಲ್ದೆ ಗಿಡ, ಮರ, ಪ್ರಾಣಿ ಪಕ್ಷಿ ಎಲ್ಲಾ ಜೀವರಾಶಿಗೆ ಸಂಕಟ ಬರುತ್ತೆ, ಆಗ ಎಲ್ಲಾ ದೇವರು ಆಂಜನೇಯನಿಗೆ ವಿಶೇಷ ವರಗಳನ್ನ ಕೊಟ್ಟು ಆಶೀರ್ವಾದ ಮಾಡ್ತಾರೆ, ಆಮೇಲೆ ವಾಯುದೇವನಿಗೆ ಕೋಪ ಕಡಿಮೆ ಆಗಿ ಮತ್ತೆ ಎಲ್ಲಾ ಸರಿ ಹೋಗುತ್ತೆ.
ಇದು ನಾವು ಸಾವಿರಾರು ವರ್ಷದಿಂದ ಹೇಳಿಕೊಂಡು, ಕೇಳಿಕೊಂಡು ಬಂದ ಸೂರ್ಯನಿಗೆ ಸಂಬಂಧಪಟ್ಟ ಒಂದು ಕಥೆ..., ಇಲ್ಲಿ ಸೂರ್ಯ ಒಂದೇ ಕಡೆ ಇರಲ್ಲ ಅಂತ clear ಆಗಿ ಹೇಳಿದಾರೆ ಅಂದ್ರೆ ಆಗಲೂ ನಮ್ಮ ಪೂರ್ವಜರಿಗೆ ಸೂರ್ಯನಿಗೆ ಚಲನೆ ಇದೆ ಅನ್ನೋ ಕಲ್ಪನೆ ಇತ್ತು ಅಂತಾಯ್ತು ☀️
ಸಾವಿರಾರು ವರ್ಷಗಳ ಹಿಂದಿನಿಂದಲೂ ನಮ್ಮಲ್ಲಿ ಸೂರ್ಯೋದಯ, ಸೂರ್ಯಾಸ್ತ ಅನ್ನೋ concept ಇದೆ.
N ಅದೂ ಕೂಡಾ ಶತಮಾನಗಳ ಹಿಂದೆ ಇಂದ ಅಲ್ಲ..., ಸಹಸ್ರಮಾನಗಳ ಹಿಂದಿನಿಂದಲೂ ನಮ್ಮ ಪೂರ್ವಜರು ಇದನ್ನ ಹೇಳಿಕೊಂಡು ಬಂದಿದ್ರು.
------------------------------------------------------------------------------
ಆಗೆಲ್ಲ ಭಾರತೀಯರು ದಡ್ಡರು ಅಂದ್ರು.
ಕೊನೆಗೆ ಭೂಮಿ ತಿರುಗುತ್ತೆ ಅಂತ ಕಂಡು ಹಿಡಿದ್ರು,
ಆಮೇಲೆ ಸೂರ್ಯ stationary..., ಬೇರೆ ಗ್ರಹಗಳು ಅವನ ಸುತ್ತ ಸುತ್ತುತ್ತೆ ಅಂದ್ರು.
ಈಗೀಗ ಅಂದ್ರೆ ಸುಮಾರು 16th, 17th century ಅಲ್ಲಿ ಇಲ್ಲ ಸೂರ್ಯ ಕೂಡಾ stationary ಅಲ್ಲ, ಅವನಿಗೂ ಚಲನೆ ಇದೆ ಅಂದ್ರು... ಪ್ರಪಂಚ wah wah ಅಂತು, ಅನ್ನಲಿ ಸಂತೋಷ... 👏🏼👏🏼👏🏼
------------------------------------------------------------------------------
ಇವರುಗಳು ಈಗ ಕಂಡು ಹಿಡಿದ ವಿಷಯ ನಮ್ಮ ಪೂರ್ವಜರಿಗೆ ಸಾವಿರಾರು ವರ್ಷಗಳ ಮೊದಲೇ ಗೊತ್ತಿತ್ತು, ಅಂದ್ರೆ ಅವರುಗಳ ಜ್ಞಾನ ಎಷ್ಟಿತ್ತು, ಎಷ್ಟು advanced ಆಗಿದ್ರು ಅನ್ನೋದು ನೆನೆಸಿಕೊಂಡರೆ ಹೆಮ್ಮೆ ಆಗುತ್ತೆ... 🇮🇳❤️🥰🙏🏼

Comments